ಕರ್ನಾಟಕ

karnataka

ETV Bharat / bharat

ಧಾರಾವಿ ಕೊರೊನಾ ಶಂಕಿತರನ್ನು ಸ್ಥಳಾಂತರಿಸಲು ತೀರ್ಮಾನ... ಏಷ್ಯಾದ ದೊಡ್ಡ ಸ್ಲಂನಲ್ಲಿ ಜಾಗದ ಕೊರತೆ

ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವ ಕಾರಣ ಹಾಟ್​ಸ್ಪಾಟ್​ಗಳಿಂದ ಜನರನ್ನು ಸ್ಥಳಾಂತರಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನ ಮಾಡಿದೆ.

Aggressive evacuation of suspected patients in Dharavi
ಧಾರಾವಿಯಿಂದ ಸ್ಥಳಾಂತರಿಸಲು ಮಹಾ ಸರ್ಕಾರ ತೀರ್ಮಾನ

By

Published : Apr 23, 2020, 10:17 AM IST

ಮುಂಬೈ: ಧಾರಾವಿ ಮತ್ತು ಇತರ ಹಾಟ್‌ಸ್ಪಾಟ್‌ಗಳಿಂದ ಶಂಕಿತ ಕೊರೊನಾ ರೋಗಿಗಳನ್ನು ಬಲವಂತವಾಗಿ ಸ್ಥಳಾಂತರಿಸಿ, ಪ್ರತ್ಯೇಕವಾಗಿರಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.

ಧಾರಾವಿ ಕೊಳೆಗೇರಿ ಪ್ರದೇಶದಲ್ಲಿ ಇದುವರೆಗೆ 190 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಧಾರಾವಿಯಲ್ಲಿನ ಮನೆಗಳು ತುಂಬಾ ಚಿಕ್ಕದಾಗಿವೆ. 10 ರಿಂದ12 ಜನರು ಒಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಿದರೂ ಸ್ಥಳಾವಕಾಶದ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಕೋವಿಡ್-19 ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗುವುದು. ಇದರಿಂದ ಸೋಂಕು ಹರಡುವಿಕೆಯನ್ನು ತಡೆದಂತಾಗುತ್ತದೆ. ಈ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಮತ್ತು ಮುಂಬೈ ಪುರಸಭೆ ಆಯುಕ್ತ ಪ್ರವೀಣ್ ಪರದೇಶಿ ಅವರೊಂದಿಗೆ ಚರ್ಚಿಸಿದ್ದೇವೆ. ಸ್ಥಳಾವಕಾಶದ ಕೊರತೆ ದೊಡ್ಡ ಸವಾಲಾಗಿರುವ ಧಾರಾವಿ ಪ್ರದೇಶದಲ್ಲಿ ಹೋಮ್ ಕ್ವಾರಂಟೈನ್​ ಸಹಾಯಕವಾಗುವುದಿಲ್ಲ ಎಂಬುದನ್ನು ಎಲ್ಲರೂ ಒಪ್ಪಿದ್ದಾರೆ ಎಂದಿದ್ದಾರೆ.

ಕ್ವಾರಂಟೈನ್​ಗಾಗಿ ಶಾಲೆಗಳ ಮೈದಾನವನ್ನು ಬಳಸಲಾಗುವುದು. ಅಧಿಕಾರಿಗಳು ಈಗಾಗಲೇ ಅಂತಹ ಸ್ಥಳಗಳಲ್ಲಿ ಕೃತಕ ಆಮ್ಲಜನಕ ಪೂರೈಕೆಯನ್ನು ವ್ಯವಸ್ಥೆಗೊಳಿಸುವ ಕೆಲಸ ಪ್ರಾರಂಭಿಸಿದ್ದಾರೆ ಎಂದಿದ್ದಾರೆ.

ನಾವು ತುಂಬಾ ಸುಲಭವಾಗಿ 73 ಸಾವಿರ ಜನರನ್ನು ಕ್ವಾರಂಟೈನ್​ನಲ್ಲಿ ಇಡಬಹುದು. ರಾಜ್ಯವು 1 ಲಕ್ಷದ 55 ಸಾವಿರ ಜನರನ್ನು ಪ್ರತ್ಯೇಕವಾಗಿರಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ. ಇತ್ತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಕಡಿಮೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದಿದ್ದಾರೆ.

ABOUT THE AUTHOR

...view details