ತ್ರಿಪುರ:ಅಗರ್ತಾಲದಲ್ಲಿಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ನಿರುದ್ಯೋಗಿ ಶಿಕ್ಷಕರ ಮೇಲೆ ಭದ್ರತಾ ಸಿಬ್ಬಂದಿ ಲಾಠಿ ಚಾರ್ಜ್ ನಡೆಸಿದ್ದು, ಇಬ್ಬರು ಫೋಟೋ ಜರ್ನಲಿಸ್ಟ್ ಸೇರಿದಂತೆ 87 ಮಂದಿ ಗಾಯಗೊಂಡಿದ್ದಾರೆ. 223 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳಿಂದಾಗಿ ಕಳೆದ ವರ್ಷ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಕೆಲಸ ಕಳೆದುಕೊಂಡ 10,323 ಶಿಕ್ಷಕರಲ್ಲಿ ಹೆಚ್ಚಿನವರು ಸರ್ಕಾರಿ ಇಲಾಖೆಗಳಲ್ಲಿ ನೇರ ಉದ್ಯೋಗವನ್ನು ಬಯಸುತ್ತಿದ್ದರು. ಆದರೆ ಜಂಟಿ ಚಳವಳಿ ಸಮಿತಿಯ (ಜೆಎಂಸಿ) ಬ್ಯಾನರ್ ಅಡಿಯಲ್ಲಿ ವಜಾಗೊಳಿಸಿದ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.