ನವದೆಹಲಿ:ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯಬೇಕು. ರೋಗಿಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕು ಎಂಬ ಆಶಯದೊಂದಿಗೆ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್ಪಿಪಿಎ) ಕ್ಯಾನ್ಸರ್ ನಿರೋಧಕ 9 ಔಷಧಗಳ ದರವನ್ನು ಶೇ 87ರಷ್ಟು ಇಳಿಸಿದೆ.
ಇದಕ್ಕೂ ಮೊದಲು ಕೇಂದ್ರ ಸರ್ಕಾರ, ಕ್ಯಾನ್ಸರ್ ನಿರೋಧಕ 42 ಔಷಧಿಗಳ ಬೆಲೆಯಲ್ಲಿ ಶೇ 85ರಷ್ಟು ಕಡಿಮೆ ಮಾಡಿ ಶೇ 30ರಷ್ಟು ದರದಲ್ಲಿ ಲಭ್ಯವಾಗುವಂತೆ ಮಾಡಿತ್ತು. ಪ್ರಸ್ತುತ 72 ವಿಧದ ಮತ್ತು 355 ಬ್ರಾಂಡ್‌ನ ಔಷಧಿಗಳು ಈ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಭಾರತೀಯ ಫಾರ್ಮಾ ಮಾರುಕಟ್ಟೆಯ ಒಟ್ಟು 1.30 ಲಕ್ಷ ಕೋಟಿ ರೂ ವ್ಯವಹಾರದಲ್ಲಿ ₹ 3,500ರಿಂದ ₹ 4,000 ಕೋಟಿವರೆಗೂ ಕ್ಯಾನ್ಸರ್ ಔಷಧಿಗಳ ಪಾಲಿದೆ.