ಕೊಲ್ಕತ್ತಾ:ಪುರ್ಬಾ ಮೇದಿನಿಪುರ ಜಿಲ್ಲೆಯ ಕಾಂಟೈ ಪುರಸಭೆಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ನಂತರ ಟಿಎಂಸಿ ಮುಖಂಡ ಸೌಮೆಂದು ಅಧಿಕಾರಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಸೌಮೆಂದು ಅಧಿಕಾರಿ ಸೇರಿ 14 ಮಂದಿ ಪುರಸಭೆ ಸದಸ್ಯರು ಬಿಜೆಪಿಗೆ ಸೇರ್ಪಡೆ "ಕಮಲ ಎಲ್ಲರ ಮನೆಯಲ್ಲಿ ಅರಳುತ್ತದೆ, ಸ್ವಲ್ಪ ಕಾಯಿರಿ. ನಾವು 108 ಕಮಲಗಳೊಂದಿಗೆ ದುರ್ಗೆಯನ್ನು ಪೂಜೆ ಮಾಡುತ್ತೇವೆ" ಎಂದು ಸೌಮೆಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸೌಮೆಂದು ಅವರನ್ನು ಟಿಎಂಸಿ ಇತ್ತೀಚೆಗಷ್ಟೇ ಪುರಸಭೆ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿತ್ತು. ಈ ವಿಚಾರವನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್ಗೆ ಅವರು ಅರ್ಜಿ ಸಲ್ಲಿಸಿದ್ದರು.
ಓದಿ:ನಿರೀಕ್ಷೆಯಂತೆ ಶಾ ರ‍್ಯಾಲಿಯಲ್ಲಿ ಮಮತಾಗೆ ಟಾಂಗ್ ಕೊಟ್ಟ ’ಅಧಿಕಾರಿ’: 11 ಎಂಎಲ್ಎಗಳು ಬಿಜೆಪಿ ಸೇರ್ಪಡೆ