ಕರ್ನಾಟಕ

karnataka

ETV Bharat / bharat

ನಟಿ ರಿಯಾ ಸಂದರ್ಶನ : ಸುಶಾಂತ್ ಕುಟುಂಬದ ಪರ ವಕೀಲ‌ರ ಟ್ವೀಟ್ - ನಟ ಸುಶಾಂತ್ ಸಿಂಗ್ ರಜಪೂತ್

ದೂರದರ್ಶನ ಸಂದರ್ಶನವೊಂದರಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ವಿರುದ್ಧ ಸುಶಾಂತ್ ಗೆಳತಿ ರಿಯಾ ಕೆಲವು ಆರೋಪಗಳನ್ನು ಮಾಡಿದ ಒಂದು ದಿನದ ನಂತರ ಸುಶಾಂತ್ ಕುಟುಂಬದ ಪರ ವಕೀಲರು ಟ್ವೀಟ್ ಮಾಡಿದ್ದಾರೆ.

Riya
Riya

By

Published : Aug 29, 2020, 12:16 AM IST

ಮುಂಬೈ:ನಟಿ ರಿಯಾ ಚಕ್ರಬೊರ್ತಿ ಟಿವಿ ಚಾನಲ್ ಸಂದರ್ಶನವೊಂದರಲ್ಲಿ ಸುಶಾಂತ್ ಸಿಂಗ್ ಕುಟುಂಬದವರ ವಿರುದ್ದ ಕೆಲವು ಆರೋಪಗಳನ್ನು ಮಾಡಿದ ಒಂದು ದಿನದ ಬಳಿಕ ಸುಶಾಂತ್ ಕುಟುಂಬದ ಪರ ವಕೀಲ ವಿವೇಕ್ ಸಿಂಗ್ ಟ್ವೀಟ್ ಮಾಡಿದ್ದಾರೆ.

"ಕಾನೂನು ಜೊತೆ ಹೋರಾಡುವವರು ಮಾಧ್ಯಮದ ಮುಂದೆ ಬಂದು ಹೇಳಿಕೆಗಳನ್ನು ನೀಡಬಾರದು ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಅವರು ನಿರಪರಾಧಿಗಳಾಗಿದ್ದರೆ ಅದು ಅವರ ಖ್ಯಾತಿಯನ್ನು ಹಾಳು ಮಾಡುತ್ತದೆ ಮತ್ತು ಅವರು ತಪ್ಪಿತಸ್ಥರಾಗಿದ್ದರೆ ಅವರಿಗೆ ಅನಗತ್ಯ ಗೋಚರತೆಯನ್ನು ನೀಡುತ್ತದೆ ” ಎಂದು ವಕೀಲ ವಿವೇಕ್ ಸಿಂಗ್ ಇಂದು ಟ್ವೀಟ್ ಮಾಡಿದ್ದಾರೆ.

ದೂರದರ್ಶನ ಸಂದರ್ಶನವೊಂದರಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ವಿರುದ್ಧ ಸುಶಾಂತ್ ಗೆಳತಿ ರಿಯಾ ಕೆಲವು ಆರೋಪಗಳನ್ನು ಮಾಡಿದ ಒಂದು ದಿನದ ನಂತರ ಅವರು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details