ಕರ್ನಾಟಕ

karnataka

ETV Bharat / bharat

ಆರ್ಟಿಕಲ್​ 370 ರದ್ದತಿ ರಾಜ್ಯಸಭೆಯಲ್ಲಿ ಪಾಸ್​... ಕೇಂದ್ರ ಸರ್ಕಾರಕ್ಕೆ ಮಹತ್ವದ ಗೆಲುವು

ಗೃಹ ಸಚಿವ ಅಮಿತ್ ಶಾ

By

Published : Aug 5, 2019, 1:45 PM IST

Updated : Aug 5, 2019, 7:52 PM IST

18:52 August 05

ಆರ್ಟಿಕಲ್​ 370 ರದ್ದತಿ ರಾಜ್ಯಸಭೆಯಲ್ಲಿ ಪಾಸ್​... ಕೇಂದ್ರ ಸರ್ಕಾರಕ್ಕೆ ಮಹತ್ವದ ಗೆಲುವು

  • ಆರ್ಟಿಕಲ್​ 370 ರದ್ದತಿ ರಾಜ್ಯಸಭೆಯಲ್ಲಿ ಪಾಸ್​... ಕೇಂದ್ರ ಸರ್ಕಾರಕ್ಕೆ ಮಹತ್ವದ ಗೆಲುವು
  • ಆರ್ಟಿಕಲ್​ 370 ರದ್ದು: ಜಮ್ಮು-ಕಾಶ್ಮೀರಕ್ಕೆ ಇನ್ಮುಂದೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ
  • ಲಡಾಖ್​ಗೂ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ: ವಿಧಾನಸಭೆ ಇಲ್ಲ
  • ಬಿಲ್​ ಅಂಗೀಕಾರದ ಪರವಾಗಿ 125 ವೋಟ್​​ ಹಾಗೂ ವಿರೋಧವಾಗಿ 61ವೋಟ್​ ಬಂದಿವೆ.
  • ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ್​ ಪುನರ್​ ರಚನೆ ಬಿಲ್​ ಪಾಸ್​​
  • ಸಮಾಜದ ಅಶಕ್ತ ವಲಯದ ಎಲ್ಲ ಕೆಳ ವರ್ಗದವರಿಗೆ ಶೇ 10ರಷ್ಟು ಮೀಸಲಾತಿ
  • ಆರ್ಟಿಕಲ್​ 370 ರದ್ದು, ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೆಹಬೂಬ್​ ಮುಫ್ತಿ ಬಂಧನ,ಸರ್ಕಾರಿ ಗೆಸ್ಟ್​ ಹೌಸ್​​ನಲ್ಲಿ ವಾಸ್ತವ್ಯ

18:42 August 05

ರಾಜ್ಯಸಭೆಯಲ್ಲಿ ಮತದಾನ ಪ್ರಕ್ರಿಯೆ ಆರಂಭ

  • ರಾಜ್ಯಸಭೆಯಲ್ಲಿ ಮತದಾನ ಪ್ರಕ್ರಿಯೆ ಆರಂಭ
  • ಜಮ್ಮು-ಕಾಶ್ಮೀರದ ಆರ್ಟಿಕಲ್​​ 370 ಬಿಲ್​ ಸಂಬಂಧ ವೋಟಿಂಗ್​ ಆರಂಭ
  • ವೋಟಿಂಗ್​ ಮಾಡುತ್ತಿದ್ದ ವೇಳೆ ತಾಂತ್ರಿಕ ತೊಂದರೆ
  • ಮತಪತ್ರಗಳ ಮೂಲಕ ನಡೆಯಲಿರುವ ಮತದಾನ

18:23 August 05

ಕಾಶ್ಮೀರ ಮುಂದಿನ ದಿನಗಳಲ್ಲಿ ಸ್ವರ್ಗವಾಗಿಯೇ ಇರಲಿದೆ: ಶಾ

  • ನಾವು ಹಲವು ರಾಜ್ಯಗಳನ್ನ ಘೋಷಣೆ ಮಾಡಿದ್ದೇವೆ. ಆದರೆ ಅಲ್ಲಿ ಆರ್ಟಿಕಲ್​ 370 ವಿಧಿ ಇಲ್ಲ
  • ನೀವೂ ಕೂಡ ಆಂಧ್ರ,ತೆಲಂಗಾಣ ರಾಜ್ಯ ಘೋಷಣೆ ಮಾಡಿದ್ದೀರಿ
  • ಕಾಶ್ಮೀರ ಮುಂದಿನ ದಿನಗಳಲ್ಲಿ ಸ್ವರ್ಗವಾಗಿಯೇ ಇರಲಿದೆ: ಶಾ'
  • ಜಮ್ಮು-ಕಾಶ್ಮೀರ ಭಾರತದ ಮುಕುಟಮಣಿ: ಅಮಿತ್​ ಶಾ ಹೇಳಿಕೆ

18:13 August 05

ಜವಾಹರ್​ ಲಾಲ್​ ನೆಹರು ನಿರ್ಧಾರದಿಂದ ಈ ವಿಧಿ ಜಾರಿ: ಶಾ

  • 70 ವಿಧಿ ಇಟ್ಟುಕೊಂಡು ಕೆಲ ಪಕ್ಷಗಳು ವೋಟ್​ ಬ್ಯಾಕಿಂಗ್​ ನಡೆಸುತ್ತಿವೆ:ಶಾ
  • ಸರ್ದಾರ್​ ಪಟೇಲ್​ ಅವರ ಮಹತ್ವದ ನಿರ್ಧಾರ ಕೈಗೊಂಡಿದ್ದರು, ಆದರೆ ನೆಹರೂ ಅವರು ಈ ವಿಧೇಯಕ ಜಾರಿಗೆ ತಂದರು
  • ನೆಹರು ನಿರ್ಧಾರದಿಂದ ವಿಧಿ ಜಾರಿಯಾಗಿದ್ದು, ಅದರ ದುರ್ಬಳಿಕೆಯಾಗುತ್ತಿದೆ
  • ಪ್ರತ್ಯೇಕವಾದಿಗಳಿಂದ ಪ್ರತಿದಿನ ಇದರ ದುರ್ಬಳಿಕೆಯಾಗುತ್ತಿದೆ
  • ಜಮ್ಮು-ಕಾಶ್ಮೀರ ಭಾರತದ ಅವಿಭಾಜ ಅಂಗವಾಗಿದ್ದು, ಮುಂದಿನ ದಿನಗಳಲ್ಲಿ ಅದರ ಅಭಿವೃದ್ಧಿ
  • ರಾಜಕೀಯ ಕಾರಣದಿಂದ ಈ ವಿಧೇಯಕ ರದ್ದುಗೊಳಿಸುತ್ತಿಲ್ಲ: ಶಾ
  • 5 ವರ್ಷದಲ್ಲೇ ಜಮ್ಮು-ಕಾಶ್ಮೀರವನ್ನ ಅತ್ಯಂತ ಅಭಿವೃದ್ಧಿಯನ್ನಾಗಿ ಮಾಡುತ್ತೇವೆ
  • ಇಲ್ಲಿನ ಯುವಕರಿಗೆ ಎಲ್ಲ ರೀತಿಯ ಸೌಲಭ್ಯ ನೀಡಿ, ನಿರುದ್ಯೋಗದಿಂದ ಮುಕ್ತಿ ಹಾಡಿಸುತ್ತೇವೆ

18:09 August 05

370 ಆರ್ಟಿಕಲ್ ರದ್ದಾಗಿರುವುದರಿಂದ ಜಮ್ಮು-ಕಾಶ್ಮೀರ ಭಾರತದ ಅವಿಭಾಜ ಅಂಗ: ಶಾ

  • 370 ಆರ್ಟಿಕಲ್ ರದ್ದಾಗಿರುವುದರಿಂದ ಜಮ್ಮು-ಕಾಶ್ಮೀರ ಭಾರತದ ಅವಿಭಾಜ ಅಂಗ
  • ನಿಮ್ಮ ನೀತಿಗಳಿಂದ ಜಮ್ಮು-ಕಾಶ್ಮೀರದಲ್ಲಿ ಅನೇಕ ಅಮಾಯಕರು ಸಾವನ್ನಪ್ಪಿದ್ದಾರೆ
  • 31,891 ಅಮಾಯಕರು ಇಲ್ಲಿಯವರೆಗೆ ಬಲಿಯಾಗಿದ್ದಾರೆ
  • ಒಬಿಸಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ
  • ನಮ್ಮ ನೀತಿಗಳು ಸರಿಯಲ್ಲವಾದ್ರೆ ಖಂಡಿತವಾಗಿ ಬದಲಿಸಿಕೊಳ್ಳುತ್ತೇವೆ
  • ಮಾಯಾವತಿ ಕೂಡ ಈ ವಿಧೇಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ

18:01 August 05

ಜಮ್ಮು-ಕಾಶ್ಮೀರದಲ್ಲಿ ಯಾವುದೇ ರೀತಿಯ ಸುಸಜ್ಜಿತ ಆಸ್ಪತ್ರೆಗಳಿಲ್ಲ: ಶಾ

  • 370ನೇ ವಿಧಿಯಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದು, ಶಿಕ್ಷಣ ವ್ಯವಸ್ಥೆಗೆ ಅದು ಮಾರಕ
  • ಜಮ್ಮು-ಕಾಶ್ಮೀರದಲ್ಲಿ ಈ ವಿಧಿಯಿಂದ ಕಾರ್ಖಾನೆ ನಿರ್ಮಾಣ ಮಾಡಲು ಆಗುತ್ತಿಲ್ಲ
  • ದೇಶದಲ್ಲಿ ಆಯುಷ್ಮಾನ್​ ಯೋಜನೆ ಜಾರಿಯಲ್ಲಿದ್ದರೂ ಇಲ್ಲಿನ ಜನರಿಗೆ ಲಭ್ಯವಾಗುತ್ತಿಲ್ಲ
  • ನಾಳೆ ರಾತ್ರಿಯಿಂದಲೇ ಜಮ್ಮು-ಕಾಶ್ಮೀರದಲ್ಲಿ ಕಡ್ಡಾಯ ಶಿಕ್ಷಣ ಯೋಜನೆ ಜಾರಿ
  • ಜಮ್ಮು-ಕಾಶ್ಮೀರದಲ್ಲಿ ಬಡತನಕ್ಕೆ ಅಲ್ಲಿನ 370 ಆರ್ಟಿಕಲ್​ ಜಾರಿ ಇರುವುದೇ ಕಾರಣ
  • ಜಮ್ಮು-ಕಾಶ್ಮೀರದಲ್ಲಿ ಯಾವುದೇ ರೀತಿಯ ಸುಸಜ್ಜಿತ ಆಸ್ಪತ್ರೆಗಳಿಲ್ಲ: ಶಾ
  • ನಾಳೆ ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾದರೆ ನಾಳೆಯಿಂದಲೇ ಕಡ್ಡಾಯ ಶಿಕ್ಷಣ ಯೋಜನೆ ಜಾರಿ

17:45 August 05

ಆರ್ಟಿಕಲ್​ 370 ರದ್ದತಿ ಮೇಲೆ ಅಮಿತ್​ ಶಾ ಭಾಷಣ... ಈ ವಿಧಿಯಿಂದಲೇ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಶೂನ್ಯ

  • ಕಾಶ್ಮೀರ ವಿಚಾರವಾಗಿ ಮೊದಲು ಪ್ರಧಾನಿ ನರೇಂದ್ರ ಮೋದಿ ವಿದೇಯಕ ಮಂಡನೆ ಮಾಡಿದ್ದರು
  • ಹಿಂಸಾಚಾರ, ರಕ್ತಪಾತಕ್ಕೆ ಬ್ರೇಕ್​ ಹಾಕುವ ಉದ್ದೇಶದಿಂದ ಈ ನಿರ್ಣಯ
  • ಜಮ್ಮು-ಕಾಶ್ಮೀರದಲ್ಲಿ ಜನಸಾಮಾನ್ಯರ ಅಭಿವೃದ್ಧಿ ಆಗಿಲ್ಲ
  • 40 ವರ್ಷಗಳಿಂದ ಅಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ
  • ವೋಟ್​ ಬ್ಯಾಂಕ್​​ ಉದ್ದೇಶದಿಂದ ಈ ಆರ್ಟಿಕಲ್​ ಬಳಕೆ ಮಾಡಿಕೊಳ್ಳಲಾಗಿದೆ
  • ಅನೇಕ ವರ್ಷಗಳಿಂದ ಕಣಿವೆ ನಾಡಿನಲ್ಲಿ ಹಿಂಸಾಚಾರ ನಡೆದಿದ್ದು, ಇದಕ್ಕೆ ಯಾರು ಹೊಣೆ
  • ಸಾವಿರಾರು ಜನರು, ಅಮಾಯಕರು ಇಲ್ಲಿ ಸಾವನ್ನಪ್ಪಿದ್ದಾರೆ
  • 370ನೇ ವಿಧಿಯಿಂದ ಭಯೋತ್ಪಾದನೆ ಹಚ್ಚಾಗಿದೆ, ಇದಕ್ಕೆ ಯಾರು ಕಾರಣ?
  • 370ನೇ ವಿಧಿಯಿಂದ ಕೇವಲ 3 ಕುಟುಂಬಗಳಿಗೆ ಅನುಕೂಲವಾಗಿದೆ: ಅಮಿತ್​ ಶಾ
  • ಕೇಂದ್ರದಿಂದ ಕೋಟ್ಯಂತರ ಹಣ ಬಿಡುಗಡೆಯಾಗುತ್ತಿತ್ತು. ಇದರಿಂದ ಯಾರ ಅಭಿವೃದ್ಧಿಯಾಗಿದೆ?: ಶಾ ಪ್ರಶ್ನೆ

15:04 August 05

  • ಕಾಶ್ಮೀರದ ಸಂಪೂರ್ಣ ಸ್ಥಿತಿಗತಿ ಅರಿಯಲು ಅಜಿತ್​​ ಧೋವಲ್​ ಕಣಿವೆ ರಾಜ್ಯಕ್ಕೆ ತೆರಳುವ ಸಾಧ್ಯತೆ
  • ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ಧೋವಲ್​​ ಜುಲೈ ಕೊನೆ ವಾರದಲ್ಲಿ ಹಿಂದೆ ಕಾಶ್ಮೀರಕ್ಕೆ ಭೇಟಿ ನೀಡಿದ್ದರು
  • ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿರುವ ಕೇಂದ್ರ
  • ಕಾಶ್ಮೀರಕ್ಕೆ ಹೆಚ್ಚುವರಿ ಸೈನಿಕರ ರವಾನೆ

14:51 August 05

'370 ರದ್ದತಿಯಿಂದ ಭಾರತದ ಶಿರಚ್ಛೇದನ'

  • 370ನೇ ವಿಧಿಯಿಂದ ಕಾಶ್ಮೀರದ ಘನತೆ ಹೆಚ್ಚಿತ್ತು
  • ಇದೀಗ ಈ ವಿಧಿಯ ರದ್ದಿನಿಂದ ಭಾರತದ ಶಿರಚ್ಛೇದನವಾದಂತಾಗಿದೆ
  • ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಿಡಿ

14:38 August 05

ಕೇಂದ್ರದ ನಡೆ ಸ್ವಾಗತಿಸಿದ ಸಂಘ ಪರಿವಾರ

  • ಕಾಶ್ಮೀರಿಗರಿಗೆ ವಿಶೇಷ ಸ್ಥಾನಮಾನ ನೀಡುವ ವಿಧಿ ರದ್ದತಿಗೆ ಆರೆಸ್ಸೆಸ್ ಸ್ವಾಗತ
  • ಕಣಿವೆ ರಾಜ್ಯದ ಬಗ್ಗೆ ವಿಶೇಷ ಆಸ್ಥೆ ವಹಿಸಿದ ಕೇಂದ್ರ ನಿರ್ಧಾರ ಸ್ವಾಗತಾರ್ಹ ಎಂದ ಸಂಘ ಪರಿವಾರ
  • ಎಲ್ಲರೂ ಮೋದಿ ಸರ್ಕಾರದ ನಡೆಯನ್ನು ಬೆಂಬಲಿಸುವಂತೆ ಆರೆಸ್ಸೆಸ್ ಮನವಿ

14:16 August 05

ಜಮ್ಮು - ಕಾಶ್ಮೀರದಲ್ಲಿ ಆರ್ಟಿಕಲ್​ 370ನೇ ವಿಧಿ ರದ್ದುಗೊಳಿಸಿರುವ ಬಗ್ಗೆ ಪಾಕಿಸ್ತಾನ ತನ್ನ ಪ್ರಕ್ರಿಯೆ  ವ್ಯಕ್ತಪಡಿಸಿದೆ.  ಈ ಬಗ್ಗೆ ಅಲ್ಲಿ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.   ಈ ರಾಜ್ಯ ಅಂತಾರಾಷ್ಟ್ರೀಯ ವಿವಾದಿತ ಪ್ರದೇಶವಾಗಿದೆ.  ಭಾರತ ಈ ಮೂಲಕ ಅಕ್ರಮ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ತನ್ನ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

14:13 August 05

ಇದೊಂದು ಕ್ರಾಂತಿಕಾರಿ ನಿರ್ಧಾರ ಎನಿಸಲ್ಲ: ಸೊರಾಬ್ಜಿ

ಇದೊಂದು ಕ್ರಾಂತಿಕಾರಿ ನಿರ್ಧಾರ ಎನ್ನಲು ಆಗಲ್ಲ ಎಂದು ಕೇಂದ್ರ ಸರ್ಕಾರದ ತೀರ್ಮಾನವನ್ನ ಮಾಜಿ ಅಟಾರ್ನಿ ಜನರಲ್​ ಸೋಲಿ ಸೊರಾಬ್ಜಿ ಹೇಳಿದ್ದಾರೆ.  ಇದೊಂದು ಜಾಣ ನಿರ್ಧಾರ ಅಲ್ಲ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

14:07 August 05

ಆಗಸ್ಟ್​ 7 ರಂದು ಆ್ಯಕ್ಷನ್​ ಪ್ಲಾನ್​ ಏನು?

  • ಆಗಸ್ಟ್​ 7 ರಂದು ಅಮಿತ್​ ಶಾ ಅವರು ಮಿತ್ರಪಕ್ಷಗಳ ಸಭೆ ಕರೆದಿದ್ದಾರೆ
  • ಕಾನೂನು ಸುವ್ಯವಸ್ಥೆ ಕಾಪಾಡಲು ಗೃಹ ಸಚಿವರಿಂದ ಮೂರು ಪ್ಲಾನ್​ 
  • ಜಮ್ಮು ಕಾಶ್ಮೀರಕ್ಕೆ ಗೃಹ ಕಾರ್ಯದರ್ಶಿ ಅವರನ್ನು ಕಳುಹಿಸಲು ಚಿಂತನೆ 
  • ಬಿಜೆಪಿಯೇತರ ಸರ್ಕಾರಗಳಿರುವ ಎಲ್ಲ ರಾಜ್ಯಗಳಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲು ಸಿದ್ಧತೆ 
  • ದೇಶಾದ್ಯಂತ ಶಾಂತಿ - ಸುವ್ಯವಸ್ಥೆ ಕಾಪಾಡಲು ಅಮಿತ್​ ಶಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಿರ್ಧಾರ
  • ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಮತ್ತೆ ಹೆಚ್ಚುವರಿಯಾಗಿ 8 ಸಾವಿರ ಸೈನಿಕರ ನಿಯೋಜನೆ

14:03 August 05

ಶಿವಸೇನೆ ಕಾರ್ಯಕರ್ತರಿಂದ ಮುಂಬೈನಲ್ಲಿ ಸಂಭ್ರಮಾಚರಣೆ

  • ಸಿಹಿತಿಂಡಿ ವಿತರಣೆ ಮಾಡಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ಶಿವಸೇನೆ
  • ಶಿವಸೇನೆ ಕಾರ್ಯಕರ್ತರಿಂದ ಮುಂಬೈನಲ್ಲಿ ಸಂಭ್ರಮಾಚರಣೆ
     

13:48 August 05

ಮೋದಿ ಸರ್ಕಾರದ ನಡೆ ಬೆಂಬಲಿಸಿದ ಸಿಎಂ ಕೇಜ್ರಿವಾಲ್

  • ಕೇಂದ್ರದ ನಡೆಯನ್ನು ಸ್ವಾಗತಿಸಿದ ದೆಹಲಿ ಸಿಎಂ ಕೇಜ್ರಿವಾಲ್​
  • ಟ್ವೀಟ್ ಮೂಲಕ ಮೋದಿ ಸರ್ಕಾರಕ್ಕೆ ಅರವಿಂದ ಕೇಜ್ರಿವಾಲ್ ಬೆಂಬಲ
  • ಕೇಂದ್ರ ಸರ್ಕಾರದ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯ

12:30 August 05

ಆರ್ಟಿಕಲ್​ 370 ರದ್ದತಿ ರಾಜ್ಯಸಭೆಯಲ್ಲಿ ಪಾಸ್​... ಕೇಂದ್ರ ಸರ್ಕಾರಕ್ಕೆ ಮಹತ್ವದ ಗೆಲುವು

ನವದೆಹಲಿ: ಹಲವು ದಶಕಗಳಿಂದ ಕೇಳಿಬರುತ್ತಿದ್ದ 35ಎ ವಿಧಿಯ ರದ್ದು ಮಾಡುವ ಕೂಗಿಗೆ ಮೋದಿ ಸರ್ಕಾರ ಮನ್ನಣೆ ನೀಡಿದ್ದು ಗೃಹ ಸಚಿವ ಅಮಿತ್ ಶಾ 370ನೇ ವಿಧಿಯನ್ನು ರದ್ದು ಮಾಡುವ ಶಿಫಾರಸು ಮಂಡಿಸಿ ಕಾಶ್ಮೀರದ ವಿಶೇಷ ಸ್ಥಾನಮಾನ ಇನ್ನು ಮುಂದೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ನಡೆಗೆ ಪರ-ವಿರೋಧ ಕೇಳಿ ಬಂದಿದ್ದು ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

  • ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆ ಬಳಿಕ ಕಣಿವೆ ರಾಜ್ಯದಲ್ಲಿ ಹೆಚ್ಚಾದ ಆತಂಕ
  • ವಾಯುಸೇನೆ ಹಾಗೂ ಭೂಸೇನೆ ಹೈ ಅಲರ್ಟ್​ನಲ್ಲಿರಲು ಸೂಚನೆ
Last Updated : Aug 5, 2019, 7:52 PM IST

ABOUT THE AUTHOR

...view details