ಕುರುಕ್ಷೇತ್ರ(ಹರಿಯಾಣ):ಇತ್ತೀಚಿನ ದಿನಗಳಲ್ಲಿ, ಯುವಕರ ಮುಂದಿರುವ ಅತಿ ದೊಡ್ಡ ಸವಾಲೆಂದರೆ ಅದು ನಿರುದ್ಯೋಗ ಸಮಸ್ಯೆ. ಬಾಲ್ಯದಿಂದಲೂ ದೊಡ್ಡವರಾದ ಮೇಲೆ ದೊಡ್ಡ ಉದ್ಯೋಗ ಪಡೆದು ಆರು ಅಂಕಿಯ ಸಂಬಳ ಎಣಿಸುವ ಕನಸು ಕಾಣುವುದು ಸಹಜ. ಆದರೆ ಎಲ್ಲ ಓದು ಮುಗಿದ ಮೇಲೆ ಉದ್ಯೋಗಕ್ಕೆ ಸೇರುವ ಸಮಯ ಬಂದಾಗ ಕೆಲಸವಿಲ್ಲದೇ ಬಹುತೇಕರು ನಿರಾಸೆರಾಗುತ್ತಾರೆ. ಹೀಗೆ ನಿರಾಸೆಗೀಡಾದರೂ ಅದರಾಚೆಗೂ ಒಂದು ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಕುರುಕ್ಷೇತ್ರ ಜಿಲ್ಲೆಯ ಯುವಕ ತರಂಜಿತ್ ಮಲ್ಹೋತ್ರಾ ನಿರೂಪಿಸಿ ತೋರಿಸಿದ್ದಾರೆ.
ತರಂಜಿತ್ ಶ್ರದ್ಧೆಯಿಂದ ಇಂಜಿನಿಯರಿಂಗ್ ಅಧ್ಯಯನ ಮುಗಿಸಿದರು. ಆದರೆ, ಅವರು ಉದ್ಯೋಗ ಹುಡುಕಲು ಪ್ರಾರಂಭಿಸಿದಾಗ ಹೈ-ಫೈ ಉದ್ಯೋಗ ಪಡೆಯುವ ಅವರ ಕನಸಿಗೆ ಬೆಂಕಿ ಬಿತ್ತು. ಆದರೂ ಅವರು ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಆದರೆ, ಸ್ವಾವಲಂಬಿಯಾಗುವುದಾಗಿ ವಾಗ್ದಾನ ಮಾಡಿದ್ದರು. ಆಗ ಅವರಿಗೆ ಹೊಳೆದ ಸ್ವ- ಉದ್ಯೋಗ ಎಂದರೆ ಶ್ವಾನ ವ್ಯಾಪಾರ ಮಾಡುವುದು.
ಕೇವಲ ಹತ್ತು ಸಾವಿರ ರೂಪಾಯಿಗಳೊಂದಿಗೆ ವ್ಯವಹಾರ ಪ್ರಾರಂಭಿಸಿದ ತಾರಂಜಿತ್ ಮಲ್ಹೋತ್ರಾ ಅವರು ಇಂದು 50 ಸಾವಿರ ರೂಪಾಯಿಯಿಂದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ ನಾಯಿಗಳನ್ನ ಸಾಕಿ ಮಾರಾಟ ಮಾಡುತ್ತಾರೆ.