ಗುಜರಾತ್:ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ವಿರೋಧಿಗಳಿಗೆ ಗೂಗ್ಲಿ ಎಸೆದು ಪ್ರತಿ ಟೀಕೆಗೂ ತಿರಿಗೇಟು ನೀಡುತ್ತಿದ್ದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್ ಪಕ್ಷ ಸೇರ್ಪೆಯಾಗಿದ್ದಾರೆ.
ಬಿಜೆಪಿ ಆಪ್ತ ಜಡೇಜಾಗೆ ಕಾಂಗ್ರೆಸ್ ಎಸೆಯಿತು ದೂಸ್ರಾ.. ಕೈ ಪಡೆ ಸೇರಿದ ಕ್ರಿಕೆಟರ್ ತಂದೆ, ಸಹೋದರಿ - undefined
ವಾರದ ಹಿಂದೆಯಷ್ಟೆ ಜಡೇಜಾ ಪತ್ನಿ ರಿವಾ ಸೋಲಂಕಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇಂದು ಅವರ ತಂದೆ ಅನಿರುದ್ಧ್ ಸಿನ್ಹಾ ಹಾಗೂ ಸಹೋದರಿ ನೈನಬಾ ಕೈಪಾಳೆಯ ಸೇರಿಕೊಂಡಿದ್ದಾರೆ.
![ಬಿಜೆಪಿ ಆಪ್ತ ಜಡೇಜಾಗೆ ಕಾಂಗ್ರೆಸ್ ಎಸೆಯಿತು ದೂಸ್ರಾ.. ಕೈ ಪಡೆ ಸೇರಿದ ಕ್ರಿಕೆಟರ್ ತಂದೆ, ಸಹೋದರಿ](https://etvbharatimages.akamaized.net/etvbharat/images/768-512-3003077-thumbnail-3x2-jadeja.jpg)
ಚಿತ್ರ ಕೃಪೆ ಟ್ಟಿಟ್ಟರ್
ವಾರದ ಹಿಂದೆಯಷ್ಟೇ ಜಡೇಜಾ ಪತ್ನಿ ರಿವಾ ಸೋಲಂಕಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇಂದು ಅವರ ತಂದೆ ಅನಿರುದ್ಧ್ ಸಿನ್ಹಾ ಹಾಗೂ ಸಹೋದರಿ ನೈನಬಾ ಅವರು ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಸೇರಿಕೊಂಡ ನೈನಬಾ ಕಾಂಗ್ರೆಸ್ ಪರ ಪ್ರಚಾರಕ್ಕಿಳಿಯುವುದಾಗಿ ಹೇಳಿದ್ದಾರೆ. ಜಡೇಜಾ ಪತ್ನಿ ಬಿಜೆಪಿಯಿಂದ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದರೆ, ಅದೇ ಕ್ರಿಕೆಟರ್ ತಂದೆ ಮತ್ತು ಸೋದರಿಯನ್ನ ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್, ಆಲ್‌ರೌಂಡರ್ ವಿರುದ್ಧ ಗೂಗ್ಲಿ ಎಸೆದಿದೆ.