ಕೋಲ್ಕತ್ತಾ: ಮಹಾಘಟಬಂಧನ ಮೂಲಕ ಬಿಜೆಪಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಈಗ ಒಳಗೊಳಗೆ ಕಚ್ಚಾಡಿಕೊಳ್ಳುತ್ತಿವೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧವೇ ರಾಹುಲ್ ಭಾಷಣ ಮಾಡಿದ್ದರು.
ಕೋಲ್ಕತ್ತಾದಲ್ಲಿಯೇ ವಿಪಕ್ಷಗಳ ಬಲ ಪ್ರದರ್ಶನ ಮಾಡಿದ್ದ ಮಮತಾ, ಈಚೆಗೆ ರಾಹುಲ್ ಅವರಿಂದ ತೀವ್ರ ಟೀಕೆಗೆ ಒಳಗಾಗಿದ್ದದರು. ರಾಹುಲ್ ವಾಗ್ದಾಳಿ ನಡೆಸಿದರೂ ತುಟಿ ಪಿಟಿಕ್ ಅನ್ನದ ಮಮತಾ ಬ್ಯಾನರ್ಜಿ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಗಾ ಟೀಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ ಎನ್ನುವ ಮೂಲಕ ನಿರ್ಲಕ್ಷ್ಯ ತೋರಿಸಿದ್ದಾರೆ.