ನವದೆಹಲಿ:ಆಕ್ಟೋಬರ್ 2 ರಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪರಿಸರಕ್ಕೆ ಮಾರವಾಗಿರುವ ಕೆಲವು ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಬಿಜೆಪಿ ಕಚೆರಿಯಿಂದಲೇ ಮೊದಿ ತಮ್ಮ ಕಾರ್ಯ ಆರಂಭಿಸಿದ್ದಾರೆ.
ಪ್ಲಾಸ್ಟಿಕ್ ಬೇಡ ಎಂದು ಮೋದಿ ಹೇಳಿದ ನಂತ್ರ ಬಿಜೆಪಿ ಕಚೇರಿಯಲ್ಲಾದ ಬದಲಾವಣೆ ಏನು? - ಪ್ಲಾಸ್ಟಿಕ್ ಮುಕ್ತ ಭಾರತ
ಬಿಜೆಪಿ ಕಚೇರಿಯಲ್ಲಿ ಕುಡಿಯುವನೀರನ್ನ ಪ್ಲಾಸ್ಟಿಕ್ ಬಾಟೆಲ್ನಲ್ಲಿ ಇರಿಸಿದ್ದನ್ನ ಕಂಡ ಪ್ರಧಾನಿ ಮೋದಿ ಅವುಗಳನ್ನ ತೆಗೆಯುವಂತೆ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಮೀಟಿಂಗ್ ವೇಳೆ ಕುಡಿಯುವ ನೀರನ್ನ ಪ್ಲಾಸ್ಟಿಕ್ ಬಾಟೆಲ್ನಲ್ಲಿ ಇರಿಸಲಾಗಿತ್ತು. ಇದನ್ನ ಕಂಡ ಮೋದಿ ಪ್ಲಾಸ್ಟಿಕ್ ಬಾಟೆಲ್ಗಳನ್ನ ತೆಗೆಯುವಂತೆ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಸೂಚನೆಯಂತೆ ಪ್ಲಾಸ್ಟಿಕ್ ಬಾಟೆಲ್ಗಳನ್ನ ತೆಗೆದು ಗಾಜಿನ ಜಾರ್ನಲ್ಲಿ ನೀರು ತಂದು ಕೊಡಲಾಯಿತು.
ಅಕ್ಟೋಬರ್ 2 ರಿಂದ ಆರು ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಪ್ಲಾಸ್ಟಿಕ್ ಬ್ಯಾಗ್ಗಳು, ಕಪ್ಗಳು, ಫಲಕಗಳು, ಸಣ್ಣ ಬಾಟಲ್ಗಳು, ಸ್ಟ್ರಾ ಮತ್ತು ಕೆಲವು ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ಮುಂದಾಗಿದೆ.