ಕರ್ನಾಟಕ

karnataka

ETV Bharat / bharat

ಐದು ವರ್ಷದೊಳಗಿನ 4 ಮುಗ್ಧ ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪಾಪಿ ತಂದೆ! - ಕುಶಲ್​ಗಢ್​ನಲ್ಲಿ ನಾಲ್ಕು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ,

After murder of four children, After murder of four children father committed suicide, father committed suicide in Kushalgarh,  Kushalgarh crime news, ನಾಲ್ಕು ಮಕ್ಕಳ ಕೊಲೆ, ನಾಲ್ಕು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ, ಕುಶಲ್​ಗಢ್​ನಲ್ಲಿ ನಾಲ್ಕು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ, ಕುಶಲ್​ಗಢ್​ ಅಪರಾಧ ಸುದ್ದಿ,
ನಾಲ್ಕು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ

By

Published : Feb 10, 2021, 11:05 AM IST

Updated : Feb 10, 2021, 2:43 PM IST

10:48 February 10

ನಾಲ್ಕು ಮುಗ್ಧ ಮಕ್ಕಳನ್ನು ತಂದೆಯೊಬ್ಬ ಕೊಲೆ ಮಾಡಿ ಬಳಿಕ ತಾನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕುಶಲ್​ಗಢ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್​ ಅಧಿಕಾರಿ

ಕುಶಲ್​ಗಢ್​:ತಂದೆಯೊಬ್ಬ ತನ್ನ ಮುದ್ದಾದ ನಾಲ್ಕು ಮಕ್ಕಳನ್ನು ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಡುಂಗ್ಲಾ​ಪಾನಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕಸೂ ಕಲಾರಾ ಐದು ವರ್ಷದೊಳಗಿನ ತನ್ನ ನಾಲ್ಕು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಹೊರವಲಯದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳೀಯರು ಮರಕ್ಕೆ ನೇತಾಡುತ್ತಿದ್ದ ಕಸೂ ಕಲಾರಾ ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್​ ತಂಡ ಮನೆಯೊಳಗೆ ನೋಡಿದಾಗ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳನ್ನು ಯಾವ ರೀತಿ ಕೊಲೆ ಮಾಡಲಾಗಿದೆ. ಯಾವ ಘಟನೆಗೆ ಕಸೂ ಕಲಾರಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸ್ ತನಿಖೆ ಬಳಿಕವೇ ತಿಳಿದು ಬರಲಿದೆ ಎಂದು ಪೊಲೀಸ್​ ಅಧಿಕಾರಿ ಪ್ರದೀಪ್​ ಕುಮಾರ್​ ಹೇಳಿದ್ದಾರೆ.

ಈ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

Last Updated : Feb 10, 2021, 2:43 PM IST

ABOUT THE AUTHOR

...view details