ಕರ್ನಾಟಕ

karnataka

ETV Bharat / bharat

ತಿಂಗಳ ಬಳಿಕ ಸಕ್ರಿಯ ರಾಜಕಾರಣಕ್ಕೆ ರಾಗಾ ರೀ ಎಂಟ್ರಿ..! - ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಪ್ರಚಾರ

ಜಾರ್ಖಂಡ್ ಚುನಾವಣಾ ಪ್ರಚಾರಕ್ಕೆ ಧುಮುಕಲಿರುವ ರಾಗಾ, ಡಿ.2ರಂದು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

Rahul will address rally in Jharkhand
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ

By

Published : Nov 28, 2019, 7:28 AM IST

ನವದೆಹಲಿ:ಕಳೆದೊಂದು ತಿಂಗಳಿನಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ತಿಂಗಳ ಆರಂಭದಲ್ಲಿ ಕಂಬ್ಯಾಕ್ ಮಾಡಲಿದ್ದಾರೆ.

ಜಾರ್ಖಂಡ್ ಚುನಾವಣಾ ಪ್ರಚಾರಕ್ಕೆ ಧುಮುಕಲಿರುವ ರಾಗಾ, ಡಿ.2ರಂದು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಸಿಮ್ದೇಗ ಕ್ಷೇತ್ರದಲ್ಲಿ ರಾಹುಲ್ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಹುಲ್ ಗಾಂಧಿ ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣಾ ಪ್ರಚಾರದ ಕೊನೆಯ ದಿನ ಭಾಷಣ ಮಾಡಿದ್ದರು. ಅಯೋಧ್ಯೆ ವಿಚಾರ ಹಾಗೂ ಮಹಾರಾಷ್ಟ್ರದಲ್ಲಿನ ಮೈತ್ರಿ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಿಂದ ರಾಗಾ ದೂರ ಉಳಿದಿದ್ದರು. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಒಂದು ವಾರ ತಡವಾಗಿ ಹಾಜರಾಗಿದ್ದಾರೆ.

ಜಾರ್ಖಂಡ್ ಚುನಾವಣೆಗೆ ಸ್ಟಾರ್ ಕ್ಯಾಂಪೇನರ್​ ಲಿಸ್ಟ್​ನಲ್ಲಿ ಸೋನಿಯಾ ಹೆಸರಿದ್ದರೂ ಪ್ರಚಾರದಲ್ಲಿ ಭಾಗಿಯಾಗುವುದು ತೀರಾ ಅನುಮಾನ ಎನ್ನಲಾಗಿದೆ. ಇನ್ನೊಂದೆಡೆ ಪ್ರಿಯಾಂಕ ವಾದ್ರಾ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ. ಹೀಗಾಗಿ ಮಹಾರಾಷ್ಟ್ರ ಹಾಗೂ ಹರಿಯಾಣದಂತೆ ರಾಹುಲ್ ಜಾರ್ಖಂಡ್​ನಲ್ಲೂ ಏಕಾಂಗಿ ಪ್ರಚಾರ ನಡೆಸಲಿದ್ದಾರೆ.​

ABOUT THE AUTHOR

...view details