ನವದೆಹಲಿ : ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಬಳಿಕ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಿಡಬ್ಲ್ಯುಸಿ ಗುದ್ದಾಟ - ಗುಲಾಂ ನಬಿ ಆಜಾದ್ ಜೊತೆ ಸೋನಿಯಾ ಚರ್ಚೆ: ಸಮಸ್ಯೆ ಆಲಿಸುವ ಭರವಸೆ - ಸಮಸ್ಯೆ ಆಲಿಸುವುದಾಗಿ ಸೋನಿಯಾ ಗಾಂಧಿ ಭರವಸೆ
ಸಿಡಬ್ಲ್ಯುಸಿ ಸಭೆಯಲ್ಲಿ ನಾಟಕೀಯ ಬೆಳವಣಿಗೆಯ ಬಳಿಕ ಅಂತಿಮವಾಗಿ ಸೋನಿಯಾ ಗಾಂಧಿಯ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರೆಸಿ, ಆಂತರಿಕ ಬಿರುಕಿಗೆ ತೇಪೆ ಹಚ್ಚಲಾಗಿತ್ತು. ಇಷ್ಟಾದರೂ, ಹಿರಿಯ ನಾಯಕರ ಅಸಮಾಧಾನ ಕೊನೆಗೊಂಡಿಲ್ಲ ಎಂದು ಹೇಳಲಾಗ್ತಿದೆ. ಹೀಗಾಗಿ, ಸೋನಿಯಾ ಗಾಂಧಿ ಆಜಾದ್ ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಆಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಜಾದ್ ಸೇರಿದಂತೆ 20ಕ್ಕೂ ಹೆಚ್ಚು ಹಿರಿಯ ನಾಯಕರು 'ಪೂರ್ಣ ಸಮಯದ' ಸಕ್ರಿಯ ನಾಯಕತ್ವ, ಪಕ್ಷದಲ್ಲಿ ಸುಧಾರಣೆ ತರುವುದು, ಪಕ್ಷದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವುದು ಮತ್ತು ಸಿಡಬ್ಲ್ಯುಸಿ ಚುನಾವಣೆಗೆ ಒತ್ತಾಯಿಸಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಹಿರಿಯ ನಾಯಕರ ವಿರುದ್ಧ ಸಿಡಬ್ಲ್ಯುಸಿ ಸಭೆಯಲ್ಲೇ ರಾಹುಲ್ ಗಾಂಧಿ ಕಿಡಿಕಾರಿದ್ದರು ಮತ್ತು ಪತ್ರ ಬರೆದವರಿಗೆ ಬಿಜೆಪಿಯವರೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಹೇಳಿಕೆ ವಿವಾದಕ್ಕೊಳಗಾಗಿ ಪಕ್ಷದಲ್ಲಿ ಆಂತರಿಕ ಜಗಳ ಉಲ್ಬಣಗೊಂಡಿತ್ತು. ಹಿರಿಯ ನಾಯಕರಾದ ಕಪಿಲ್ ಸಿಬಲ್ ಮತ್ತು ಗುಲಾಂ ನಬಿ ಆಜಾದ್ ತಮ್ಮ ವಿರುದ್ಧ ಆರೋಪ ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದರು.
ಸಿಡಬ್ಲ್ಯುಸಿ ಸಭೆಯ ಬಳಿಕ ಕಪಿಲ್ ಸಿಬಲ್, ಮನೀಶ್ ತಿವಾರಿ, ಮುಕುಲ್ ವಾಸ್ನಿಕ್, ಆನಂದ್ ಶರ್ಮಾ, ಶಶಿ ತರೂರ್ ಸೇರಿದಂತೆ ಕೆಲವು ಮುಖಂಡರು ಆಜಾದ್ ನಿವಾಸಕ್ಕೆ ತೆರಳಿದ್ದರು. ಮುಂಜಾನೆಯಿಂದ ಸಂಜೆಯವರೆಗಿನ ನಾಟಕೀಯ ಬೆಳವಣಿಗೆಯ ಬಳಿಕ ಕೊನೆಗೆ ಸೋನಿಯಾ ಗಾಂಧಿ ಅವರನ್ನೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಸಿ, ಆಂತರಿಕ ಬಿರುಕಿಗೆ ತೇಪೆ ಹಚ್ಚಲಾಗಿತ್ತು. ಇಷ್ಟಾದರೂ, ಹಿರಿಯ ನಾಯಕರ ಅಸಮಾಧಾನ ಕೊನೆಗೊಂಡಿಲ್ಲ ಎಂದು ಹೇಳಲಾಗ್ತಿದೆ. ಹೀಗಾಗಿ, ಸೋನಿಯಾ ಗಾಂಧಿ ಆಜಾದ್ರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಆಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.