ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ನಾಳೆ ಮುಂಜಾನೆ ಗಲ್ಲು ಶಿಕ್ಷೆಯಾಗುತ್ತಿದ್ದು, ನಿರ್ಭಯಾ ತಾಯಿ ಆಶಾದೇವಿ ನಿಟ್ಟುಸಿರು ಬಿಟ್ಟಿದ್ದಾರೆ.
7 ವರ್ಷಗಳ ಬಳಿಕ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತಿದೆ: ನಿರ್ಭಯಾ ತಾಯಿ - 2012ರ ನಿರ್ಭಯಾ ಸಾಮೂಹಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ
ಏಳು ವರ್ಷಗಳ ಬಳಿಕ ನನ್ನ ಮಗಳಿಗೆ ನ್ಯಾಯ ಹಾಗೂ ಅವಳ ಆತ್ಮಕ್ಕೆ ಶಾಂತಿ ಸಿಗುತ್ತಿದೆ ಎಂದು ನಿರ್ಭಯಾ ತಾಯಿ ಆಶಾದೇವಿ ಹೇಳಿದ್ದಾರೆ.
ನಿರ್ಭಯಾ ತಾಯಿ ಆಶಾದೇವಿ
ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ತಿರಸ್ಕರಿಸಿದ ಬಳಿಕ ಮಾತನಾಡಿದ ಆಶಾದೇವಿ, ಏಳು ವರ್ಷಗಳ ಬಳಿಕ ನನ್ನ ಮಗಳಿಗೆ ನ್ಯಾಯ ಹಾಗೂ ಅವಳ ಆತ್ಮಕ್ಕೆ ಶಾಂತಿ ಸಿಗುತ್ತಿದೆ. ನನಗೆ ಈಗ ನೆಮ್ಮದಿ ಸಿಗಲಿದೆ ಎಂದು ಹೇಳಿದರು.
ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್ರ ಕುತ್ತಿಗೆಗೆ ನಾಳೆ ಬೆಳಗ್ಗೆ 5.30ಕ್ಕೆ ಕುಣಿಕೆ ಬೀಳಲಿದೆ.