ಅಸ್ಸಾಂ/ಗುವಾಹಟಿ: ಈಗಾಗಲೇ ಅಸ್ಸಾಂನಲ್ಲಿ 2,500 ಹಂದಿಗಳನ್ನು ಬಲಿ ಪಡೆದಿದ್ದ ಆಫ್ರಿಕನ್ ಹಂದಿ ಜ್ವರ ಇದೀಗ ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಪಶುಸಂಗೋಪನೆ ಮತ್ತು ಪಶುವೈದ್ಯ ಸಚಿವ ಅತುಲ್ ಬೋರಾ, ಈ ಹಂದಿಜ್ವರ ಹರಡುವುದನ್ನು ತಡೆಗಟ್ಟಲು ಪರ್ಯಾಯ ಕ್ರಮಗಳನ್ನು ಅನುಸರಿಸಲಾಗುವುದು. ಆದರೆ ಯಾವುದೇ ಕಾರಣಕ್ಕೂ ತಕ್ಷಣವೇ ಹಂದಿಗಳನ್ನು ಕೊಲ್ಲುವ ನಿರ್ಧಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.
ಭೂಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಸ್ಎಡಿ) ಇದು ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಎಂದು ದೃಢಪಡಿಸಿದೆ. ಇದು ದೇಶದಲ್ಲಿ ಪತ್ತೆಯಾದ ಆಫ್ರಿಕನ್ ರೋಗದ ಮೊದಲ ನಿದರ್ಶನ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಬೋರಾ ತಿಳಿಸಿದ್ದಾರೆ.
ಈ ಮೊದಲು ಹಂದಿ ಜ್ವರ ಅಸ್ಸಾಂನ ಸುಮಾರು 306 ಹಳ್ಳಿಗಳಲ್ಲಿ ಪತ್ತೆಯಾಗಿದ್ದು, ಒಟ್ಟು 2,500 ಹಂದಿಗಳು ಇದರಿಂದ ಸಾವನ್ನಪ್ಪಿದ್ದವು.
2019 ರ ಗಣತಿಯ ಪ್ರಕಾರ, ರಾಜ್ಯದಲ್ಲಿ ಹಂದಿ ಸಂಖ್ಯೆ 21 ಲಕ್ಷವಿದ್ದು, ಇತ್ತೀಚಿನ ದಿನಗಳಲ್ಲಿ ಇದು ಸುಮಾರು 30 ಲಕ್ಷಕ್ಕೆ ಏರಿದೆ ಎಂದು ಸಚಿವರು ಹೇಳಿದ್ದಾರೆ.