ಕಾಬೂಲ್:ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರ ಬರುತ್ತಿದ್ದ ಅಫ್ಘಾನ್ ಸುಪ್ರೀಂಕೋರ್ಟ್ ನ್ಯಾಯಾಧೀಶರೊಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಹಮಾನ್ ಮಿನಾದ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮುಗಿಸಿ ಹೊರ ಬಂದ ನ್ಯಾಯಾದೀಶ ಅಬ್ದುಲ್ ಜಮಿಲ್ ಹತ್ಯೆಯಾಗಿದ್ದಾರೆ.
ಓದಿ-ಚೀನಾದ ಕಲ್ಲಿದ್ದಲು ಗಣಿಯಲ್ಲಿ ಅವಘಡ: ವಿಷಕಾರಿ ಅನಿಲ ಸೇವಿಸಿ 18 ಮಂದಿ ಬಲಿ
ಅಫ್ಘಾನ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಾಗರಿಕರು ಮತ್ತು ಮಿಲಿಟರಿ ಅಧಿಕಾರಿಗಳ ವಿರುದ್ಧ ಉದ್ದೇಶಿತ ದಾಳಿಗಳನ್ನು ತಾಲಿಬಾನ್ ಉಗ್ರರು ನಡೆಸುತ್ತಿದ್ದಾರೆ. ಸರ್ಕಾರ, ನ್ಯಾಟೋ ಮತ್ತು ಯು.ಎಸ್ ನೇತೃತ್ವದ ಸೈನ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಜನರನ್ನು ಉಗ್ರರು ಗುರಿಯಾಗಿಸಿಕೊಂಡಿದ್ದಾರೆ.