ಕರ್ನಾಟಕ

karnataka

ETV Bharat / bharat

ಹಿಮಾಲಯದ ತಪ್ಪಲಿನಲ್ಲಿ ಹೆಚ್ಚು ಮಳೆ ಬೀಳಲು ಕಾರಣವೇನು ಗೊತ್ತೇ?

ಇಂಡೋ-ಗಂಗೆಟಿಕ್ ಬಯಲು ಪ್ರದೇಶವು ದಕ್ಷಿಣ ಮತ್ತು ಹಿಮಾಲಯದ ತಪ್ಪಲಿನ ಮೇಲ್ಭಾಗದಲ್ಲಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಏರೋಸಾಲ್‌ಗಳು ಸಂಗ್ರಹವಾಗಿದೆ. ಅದರಲ್ಲೂ ಹೆಚ್ಚಿನವು ಕಪ್ಪು ಇಂಗಾಲ ಮತ್ತು ಧೂಳಿನಿಂದಾಗಿವೆ. ಏರೋಸಾಲ್ ವಿಪರೀತ ಮಳೆಯಾಗಲು ಪ್ರಮುಖ ಕಾರಣವಾಗಿದ್ದು, ಅದು ಮಳೆ ಬೀಳುವಿಕೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ.

aerosols-in-indo-gangetic-plain-have-led-to-increased-incidents-of-high-rainfall-in-the-himalayan-foothills
ಹಿಮಾಲಯದ ತಪ್ಪಲಿನಲ್ಲಿ ಮಳೆಯ ತೀವ್ರತೆಗೆ ಕಾರಣ ಇಂಡೋ-ಗಂಗೆಟಿಕ್ ಬಯಲಿನಲ್ಲಿರುವ 'ಏರೋಸಾಲ್‌'ಗಳು

By

Published : Dec 11, 2020, 1:32 PM IST

ಇಂಡೋ-ಗಂಗೆಟಿಕ್ ಬಯಲನ್ನು ವಿಶ್ವದ ಅತ್ಯಂತ ಕಲುಷಿತ ಪ್ರದೇಶಗಳಲ್ಲಿ ಒಂದನ್ನಾಗಿ ಮಾಡಿರುವುದು ಕಪ್ಪು ಇಂಗಾಲ ಮತ್ತು ಧೂಳಿನಿಂದ ಕೂಡಿದ ಏರೋಸಾಲ್‌ಗಳು. ಹಿಮಾಲಯದ ತಪ್ಪಲಿನಲ್ಲಿ ಹೆಚ್ಚು ಮಳೆಯಾಗಲು ಈ ಏರೋಸಾಲ್​ಗಳೇ ಪ್ರಮುಖ ಕಾರಣವಾಗಿವೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಇಂಡೋ-ಗಂಗೆಟಿಕ್ ಬಯಲು ಪ್ರದೇಶವು ದಕ್ಷಿಣ ಮತ್ತು ಹಿಮಾಲಯದ ತಪ್ಪಲಿನ ಮೇಲ್ಭಾಗದಲ್ಲಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಏರೋಸಾಲ್‌ಗಳು ಸಂಗ್ರಹವಾಗಿದೆ. ಅದರಲ್ಲೂ ಹೆಚ್ಚಿನವು ಕಪ್ಪು ಇಂಗಾಲ ಮತ್ತು ಧೂಳಿನಿಂದಾಗಿವೆ. ಏರೋಸಾಲ್ ವಿಪರೀತ ಮಳೆಯಾಗಲು ಪ್ರಮುಖ ಕಾರಣವಾಗಿದ್ದು, ಅದು ಮಳೆ ಬೀಳುವಿಕೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ. ವಿಶೇಷವಾಗಿ ಗಾಳಿಯ ದ್ರವ್ಯರಾಶಿಯು ಕಡಿಮೆ ಎತ್ತರದಿಂದ ಹೆಚ್ಚಿನ ಎತ್ತರಕ್ಕೆ ಚಲಿಸುವಾಗ ಒಂದು ಒತ್ತಡ ಸೃಷ್ಟಿಸುತ್ತದೆ. ಅದನ್ನು ತಾಂತ್ರಿಕವಾಗಿ 'ಏರೋಗ್ರಾಫಿಕ್' ಒತ್ತಡ ಎಂದು ಕರೆಯುತ್ತಾರೆ.

ರೂರ್ಕೆಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜರ್ಮನಿಯ ಲೈಪ್‌ಜಿಗ್ ವಿಶ್ವವಿದ್ಯಾಲಯದ ಲೈಪ್‌ಜಿಗ್ ಇನ್‌ಸ್ಟಿಟ್ಯೂಟ್ ಫಾರ್ ಮೆಟಿಯಾಲಜಿ (ಎಲ್‌ಐಎಂ), ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರ ತಂಡವು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಬೆಂಬಲದೊಂದಿಗೆ ಹವಾಮಾನ ಬದಲಾವಣೆ, ಹಿಮಾಲಯ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಲು ಏರೋಸಾಲ್ ನೇರ ವಿಕಿರಣಶೀಲ ಪರಿಣಾಮದ ನಿರ್ಣಾಯಕ ಪಾತ್ರ ಹೇಗಿದೆ ಎಂಬುದನ್ನು ತಿಳಿಸಿವೆ. ಈ ಸಂಬಂಧ ಆವಿಷ್ಕಾರಗಳನ್ನೊಳಗೊಂಡ ಕೃತಿಗಳನ್ನು ಇತ್ತೀಚೆಗೆ ‘ಅಟ್ಮಾಸ್ಫಿಯರಿಕ್ ಕೆಮಿಸ್ಟ್ರಿ ಅಂಡ್ ಫಿಸಿಕ್ಸ್’ ಎಂಬ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಿಸಲು ಒಪ್ಪಿಕೊಳ್ಳಲಾಗಿದೆ.

ಏರೋಸೋಲ್​ ಕಣಗಳ ಹೊರಸೂಸುವಿಕೆಯು ಮೋಡದ ವ್ಯವಸ್ಥೆಗಳ ಭೌತಿಕ ಮತ್ತು ಕ್ರಿಯಾತ್ಮಕ ಗುಣಲಕ್ಷಣಗಳನ್ನು ಬದಲಾಯಿಸಬಹುದು ಮತ್ತು ಪ್ರತಿಯಾಗಿ ಆ ಮೋಡಗಳ ಕೆಳಗಿರುವ ಭೂಗೋಳದ ಪ್ರದೇಶಗಳಲ್ಲಿ ಮಳೆಯನ್ನು ಹೆಚ್ಚಿಸುತ್ತದೆ ಎಂದು ಅವರು ತೋರಿಸಿದರು.

ಈ ಅಧ್ಯಯನವು 17 ವರ್ಷಗಳ(2001-2017) ಮಳೆ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಿದೆ. ಏರೋಸಾಲ್ ಆಪ್ಟಿಕಲ್ ಡೆಪ್ತ್ (ಎಒಡಿ) ಎಂದು ಕರೆಯಲ್ಪಡುವ ಏರೋಸಾಲ್ ಮಾಪನಗಳು, ವಿವಿಧ ಎತ್ತರಗಳಲ್ಲಿ ಒತ್ತಡ, ತಾಪಮಾನ ಮತ್ತು ತೇವಾಂಶದಂತಹ ಹವಾಮಾನ ಪುನರ್ವಿಶ್ಲೇಷಣೆ, ಕ್ಷೇತ್ರಗಳ “ತೇವಾಂಶದ ಸ್ಥಿರ ಶಕ್ತಿ” ಲೆಕ್ಕಾಚಾರ ಮಾಡಲು ಬಳಸಲಾಗುತ್ತದೆ. ಹಿಮಾಲಯದ ತಪ್ಪಲಿನಲ್ಲಿ ಹೆಚ್ಚಿನ ಮಳೆಗೆ ಕಾರಣ ಭಾರತ ಪ್ರದೇಶದಿಂದ ಹೊರಹೋಗುವ ದೀರ್ಘ-ತರಂಗ ವಿಕಿರಣ. ಹೆಚ್ಚಿನ ಮಳೆಗೆ ಕಾರಣವಾಗಿರುವ ಏರೋಸಾಲ್ ಲೋಡಿಂಗ್ ಮತ್ತು ಹೆಚ್ಚಿನ ತೇವಾಂಶವುಳ್ಳ ಸ್ಥಿರ ಶಕ್ತಿ (ಎಂಎಸ್‌ಇ) ಮೌಲ್ಯಗಳ ನಡುವಿನ ಸ್ಪಷ್ಟವಾದ ಸಂಬಂಧಗಳನ್ನು ತಂಡವು ಕಂಡುಹಿಡಿದಿದೆ.

ABOUT THE AUTHOR

...view details