ನವದೆಹಲಿ: ದೇಶಾದ್ಯಂತ ಬಾರ್ ಕೌನ್ಸಿಲ್ ಸದಸ್ಯರು ಎದುರಿಸುತ್ತಿರುವ ಸಮಸ್ಯೆ ಕುರಿತು ಅಡ್ವೊಕೇಟ್ ಪವನ್ ಪ್ರಕಾಶ್ ಪಾಠಕ್ ಮತ್ತು ಅಲೋಕ್ ಸಿಂಗ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ಗೆ ಪತ್ರ ಬರೆದಿದ್ದಾರೆ. ಕೊರೊನಾ ಕಾರಣ ಹಣಕಾಸಿನ ಸಂಕಷ್ಟ ಎದುರಾಗಿರುವುದಾಗಿ ಅವರು ತಿಳಿಸಿದ್ದಾರೆ.
"ಒಂದು ನಿರ್ದಿಷ್ಟ ಅವಧಿಗೆ ಸಾಲ ವಿತರಣೆಯ ರೂಪದಲ್ಲಿ ಧನ ಸಹಾಯವನ್ನು ನಿಗದಿತ ಅವಧಿಯ ನಂತರ ಸಹಾಯದ ಹಣವನ್ನು ಹಿಂದಿರುಗಿಸುವ ಅವಕಾಶವನ್ನು ವಕೀಲರಿಗೆ ಒದಗಿಸಬೇಕು. ಒಮ್ಮೆ ನ್ಯಾಯಾಲಯವು ಸಮಂಜಸವಾದ ಬಡ್ಡಿಯೊಂದಿಗೆ ತುರ್ತು ನಿಧಿಯನ್ನು ವಿತರಿಸಬಹುದು. ವಿವಿಧ ರಾಜ್ಯಗಳ ಬಾರ್ ಅಸೋಸಿಯೇಷನ್‌ಗಳು ಅಥವಾ ಬಿಸಿಐ ಇದನ್ನು ಕಾನೂನು ನೆರವು ಅಥವಾ ಯಾವುದೇ ಮಾನವಕುಲದ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು"ಎಂದು ಪತ್ರವನ್ನು ಬರೆದಿದ್ದಾರೆ.