ಕರ್ನಾಟಕ

karnataka

ETV Bharat / bharat

ಕೊರೊನಾ ಮಧ್ಯೆ ಮಕ್ಕಳ ಕುರಿತು ಸುರಕ್ಷತಾ ಕ್ರಮ ಕೈಗೊಳ್ಳಬೇಕು: ಯುನಿಸೆಫ್ ಸಲಹೆ - ಕೊರೊನಾ ವೈರಸ್

ಕೋವಿಡ್ -19 ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯ, ಸುರಕ್ಷತೆ, ಪೋಷಣೆ, ಕಲಿಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಯುನಿಸೆಫ್ ವರದಿಯೊಂದನ್ನ ಬಿಡುಗಡೆ ಮಾಡಿದೆ.

children
children

By

Published : Jun 10, 2020, 12:33 PM IST

ಹೈದರಾಬಾದ್: ಕೊರೊನಾ ವೈರಸ್ ಮಧ್ಯೆ, ಸಾಂಕ್ರಾಮಿಕ ದುರಂತವನ್ನ ಎದುರಿಸಲು ವಿಶೇಷವಾಗಿ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆರೋಗ್ಯ, ಸುರಕ್ಷತೆ, ಪೋಷಣೆ, ಕಲಿಕೆ ಮತ್ತು ಅಭಿವೃದ್ಧಿ ಕುರಿತು ಗಮನಹರಿಸಬೇಕು ಎಂದು ಯುನಿಸೆಫ್ ಪೋಷಕರಿಗೆ ಸಲಹೆ ನೀಡಿದೆ.

'ದೇಶದಲ್ಲಿ ಆರಂಭಿಕ ಬಾಲ್ಯದ ಅಭಿವೃದ್ಧಿ' ಎಂಬ ವರದಿಯನ್ನ ಯುನಿಸೆಫ್ ಬಿಡುಗಡೆ ಮಾಡಿದೆ. ಇದು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಲನೆ ಪೋಷಣೆ ಮಾಡುವ ಪೋಷಕರಿಗೆ ಆರೋಗ್ಯ ಮತ್ತು ಸುರಕ್ಷತೆಯ ಕುರಿತು ಮಾಹಿತಿ ನೀಡುತ್ತಿದೆ.

ಆರು ವರ್ಷದವರೆಗೆ ಮಗುವಿನ ಮನಸ್ಸು ತುಂಬಾ ವೇಗವಾಗಿ ಬೆಳೆಯುತ್ತದೆ ಮತ್ತು ವಿಶೇಷವಾಗಿ ಆರಂಭಿಕ ಮೂರು ವರ್ಷಗಳ ಬಳಿಕ, ಮಗುವಿನ ಮಾನಸಿಕ ಸಾಮರ್ಥ್ಯವು ವೇಗವಾಗಿ ಬೆಳೆಯುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯಲ್ಲಿ ಪೋಷಕರು ತೀವ್ರ ಒತ್ತಡದಲ್ಲಿದ್ದು, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.

ಕೊರೊನಾ ವೈರಸ್ ಪೋಷಕರು ಮತ್ತು ಮಕ್ಕಳಿಗೆ ಹೊಸ ಸವಾಲುಗಳನ್ನು ತಂದಿದೆ. ವೈರಸ್ ಪರಿಣಾಮದಿಂದ ಸಣ್ಣ ಮಕ್ಕಳು ಭಯಭೀತರಾಗಿದ್ದಾರೆ. ಶಾಲೆಗಳು ಮುಚ್ಚಿರುವುದರಿಂದ ಅವರ ದೈನಂದಿನ ಜೀವನ ಅಕ್ಷರಶಃ ಬದಲಾಗಿದೆ. ಮಕ್ಕಳ ಚಲನ ವಲನೆಗೆ ತೀವ್ರ ನಿರ್ಬಂಧ ಜಾರಿಗೊಳಿಸಲಾಗುತ್ತಿದೆ. ಈ ಸಮಯದಲ್ಲಿ ಪೋಷಕರು ಮಕ್ಕಳಿಗೆ ಕೊರೊನಾ ವೈರಸ್ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಬೇಕು, ಏನು ಮಾಡಬೇಕು ಮತ್ತು ವೈರಸ್ ವಿರುದ್ಧ ಹೋರಾಡಲು ಅವರು ಹೇಗೆ ಸಿದ್ಧರಾಗಿರಬೇಕು ಎಂದು ಯುನಿಸೆಫ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details