ಮುಂಬೈ: ಶಿವಸೇನ ನಾಯಕ ಆದಿತ್ಯ ಠಾಕ್ರೆ ಗುರುವಾರ ತಡರಾತ್ರಿ ಪಕ್ಷದ ನೂತನ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮುಂಬೈನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಪಕ್ಷದ ಶಾಸಕರನ್ನು ಠಾಕ್ರೆ ಭೇಟಿ ಮಾಡಿದ್ದಾರೆ. ಯಾವುದೇ ಹಂತದಲ್ಲಿ ಪಕ್ಷದಿಂದ ಶಾಸಕರು ಕೈತಪ್ಪುವ ಭೀತಿ ಪಕ್ಷಕ್ಕಿದೆ. ಇನ್ನೊಂದೆಡೆ ಪ್ರಸ್ತುತ ಸರ್ಕಾರದ ಅವಧಿ ಇಂದು ಕೊನೆಗೊಳ್ಳುವುದರಿಂದ, ಪಕ್ಷಗಳಿಗೆ ಈ ದಿನ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಶಾಸಕರನ್ನು ಹೋಟೆಲ್ನಲ್ಲೇ ಉಳಿಸುವ ಸಾಧ್ಯತೆಗಳಿವೆ. ಅಲ್ಲದೆ ಶಿವಸೇನ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗೆ ಮತ್ತೊಂದು ಸುತ್ತಿನ ಸಭೆ ನಡೆದು, ಮತ್ತೆ ಅದೇ ಹೋಟೆಲ್ಗೆ ಶಾಸಕರನ್ನು ಶಿಫ್ಟ್ ಮಾಡಲಾಗುತ್ತದೆ ಎನ್ನಲಾಗಿದೆ.