ಕರ್ನಾಟಕ

karnataka

ETV Bharat / bharat

ಭಾರತ - ನೇಪಾಳ ಗಡಿಯಲ್ಲಿ ಹೆಚ್ಚುವರಿ ಎಸ್‌ಎಸ್‌ಬಿ ಪಡೆಗಳ ನಿಯೋಜನೆ - ಹೆಚ್ಚುವರಿ ಎಸ್‌ಎಸ್‌ಬಿ ಪಡೆಗಳ ನಿಯೋಜನೆ

ಉತ್ತರಾಖಂಡದ ಭಾರತ - ನೇಪಾಳ ಗಡಿಯಲ್ಲಿ ಹೆಚ್ಚುವರಿ ಎಸ್‌ಎಸ್‌ಬಿ ಪಡೆಗಳನ್ನು ನಿಯೋಜಿಸಲಾಗಿದೆ. ಈ ಮೂಲಕ ನೇಪಾಳ ಗಡಿಯಲ್ಲಿ ಎಚ್ಚರಿಕೆ ವಹಿಸಲಾಗಿದೆ.

ssb
ssb

By

Published : Jun 26, 2020, 3:24 PM IST

ಡೆಹ್ರಾಡೂನ್ (ಉತ್ತರಾಖಂಡ): ಇತ್ತೀಚೆಗಷ್ಟೇ ಗಡಿಯಲ್ಲಿ ನೇಪಾಳ ಕ್ಯಾತೆ ತೆಗೆದು ಒಬ್ಬ ಯೋಧನನ್ನು ಬಲಿ ಪಡೆದಿತ್ತು. ಹೀಗಾಗಿ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಭಾರತ-ನೇಪಾಳ ಗಡಿಯಲ್ಲಿ ಪಿಥೋರ್‌ಗರ್​ನ ಧಾರ್ಚುಲಾದಿಂದ ಕಲಾಪಾಣಿಯವರೆಗೆ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.

ಇಲ್ಲಿ ನಿಯೋಜಿಸಲಾಗಿರುವ ಇತರ ಪಡೆಗಳಲ್ಲದೇ, ಎಸ್‌ಎಸ್‌ಬಿ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಸಂತೋಷ್ ನೇಗಿ ತಿಳಿಸಿದ್ದಾರೆ.

ಎಸ್‌ಎಸ್‌ಬಿ ಮೂಲಗಳ ಪ್ರಕಾರ, ನೇಪಾಳ ಗಡಿಯಲ್ಲಿ ಎಚ್ಚರ ವಹಿಸಲಾಗಿದೆ. ಉತ್ತರಾಖಂಡದಲ್ಲಿ, ನೇಪಾಳದ ಮುಕ್ತ ಗಡಿಯನ್ನು ಮೊಹರು ಮಾಡಲಾಗಿದೆ. ಕಡಿಮೆ ಜನಸಂಖ್ಯೆ ಇರುವ ನೇಪಾಳ ಗಡಿ ಪ್ರದೇಶವನ್ನು ಎಸ್‌ಎಸ್‌ಬಿ ಜವಾನರು ಕಾವಲು ಕಾಯುತ್ತಿದ್ದಾರೆ.

ಹೊಸ ನಕ್ಷೆಯೊಂದಿಗೆ ನೇಪಾಳವು ಭಾರತದ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ನೇಪಾಳ ನಡುವೆ ಉದ್ವಿಗ್ನತೆ ಉಂಟಾಗಿತ್ತು.

ABOUT THE AUTHOR

...view details