ಕೊಚ್ಚಿ:ಮಲಯಾಳಂನ ಜನಪ್ರಿಯ ನಟ ಟೊವಿನೋ ಥಾಮಸ್ ಅವರು ತೀವ್ರ ಹೊಟ್ಟೆ ನೋವಿನಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಅವರಿಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಟ ಟೊವಿನೋ ಥಾಮಸ್ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ಚಿಕಿತ್ಸೆ - severe stomach pain
ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಟೊವಿನೋ ಥಾಮಸ್ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಟ ಟೋವಿನೋ ಥಾಮಸ್
ನಿನ್ನೆ ಕ್ರಿಕೆಟ್ ಆಡುವ ವೇಳೆ ಅವರು ಗಾಯಗೊಂಡಿದ್ದರು. ಇಂದು ಅವರು ತಮ್ಮ ಮುಂದಿನ ಚಿತ್ರ 'ಕಾಲಾ' ಚಿತ್ರೀಕರಣಕ್ಕಾಗಿ ಶೂಟಿಂಗ್ಗೆ ಬಂದಿದ್ದರು.
ಈ ವೇಳೆ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಆಂತರಿಕ ರಕ್ತಸ್ರಾವ ಆಗಿರುವುದರಿಂದ ತೀವ್ರ ನಿಗಾ ಚಿಕಿತ್ಸಾ ಘಟಕಕ್ಕೆ ಶಿಫ್ಟ್ ಮಾಡಲಾಗಿದೆ.