ಹೈದರಾಬಾದ್: ತೆಲುಗು ಹಿರಿಯ ನಟ ರಾಜಶೇಖರ್ ಕೊರೊನಾದಿಂದ ಗುಣಮುಖರಾಗಿದ್ದು, ಸಿಟಿ ನ್ಯೂರೋ ಸೆಂಟರ್ ಫಾರ್ ಸರ್ವಿಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹಿಂದಿರುಗಿದ್ದಾರೆ.
ಕೊರೊನಾದಿಂದ ನಟ ರಾಜಶೇಖರ್ ಗುಣಮುಖ, ಡಿಸ್ಚಾರ್ಜ್ - ಸಿಟಿ ನ್ಯೂರೋ ಸೆಂಟರ್ ಫಾರ್ ಸರ್ವಿಸ್ ಆಸ್ಪತ್ರೆಯಿಂದ ರಾಜಶೇಖರ್ ಡಿಸ್ಚಾರ್ಜ್
ಕೆಲವು ದಿನಗಳ ಹಿಂದೆ ಕೋವಿಡ್ ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೆಲುಗು ಹಿರಿಯ ನಟ ರಾಜಶೇಖರ್, ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ರಾಜಶೇಖರ್ಗೆ ಕೋವಿಡ್ ದೃಢಪಟ್ಟಿದ್ದು, ಸಿಟಿ ನ್ಯೂರೋ ಸೆಂಟರ್ ಫಾರ್ ಸರ್ವಿಸ್ ಗೆ ದಾಖಲಿಸಲಾಗಿತ್ತು. ಹಲವೆಡೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗಳೆಲ್ಲ ಸುಳ್ಳು. ರಾಜಶೇಖರ್ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯ್ತು. ಬಳಿಕ ಪ್ಲಾಸ್ಮಾ ಥೆರಪಿ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸಾವಿನ ದವಡೆಯಿಂದ ರಾಜಶೇಖರ್ ಪ್ರಾಣ ಉಳಿಸಿದ್ದಕ್ಕಾಗಿ ವೈದ್ಯಕೀಯ ತಂಡಕ್ಕೆ ಪತ್ನಿ ಜೀವಿತಾ ರಾಜಶೇಖರ್ ಧನ್ಯವಾದ ತಿಳಿಸಿದ್ದಾರೆ. ರಾಜಶೇಖರ್ ಅವರು ತಿಂಗಳುಗಟ್ಟಲೆ ಆಸ್ಪತ್ರೆ ಸಿಬ್ಬಂದಿ ತಮ್ಮನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ನಾನು ಅಭಾರಿ ಎಂದಿದ್ದಾರೆ.