ಕರ್ನಾಟಕ

karnataka

ETV Bharat / bharat

ಐಸೋಲೆಷನ್​ ವಾರ್ಡ್​ಗೆ ರೊಬೋಟ್​ ದಾನ ಮಾಡಿದ ನಟ ಮೋಹನ್ ಲಾಲ್ - ಎರ್ನಾಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆ

ನಟ ಮೋಹನ್ ಲಾಲ್ ಅವರ ವಿಶ್ವಸಾಂಥಿ ಫೌಂಡೇಶನ್ ವತಿಯಿಂದ ಶನಿವಾರ ಎರ್ನಾಕುಲಂ ವೈದ್ಯಕೀಯ ಕಾಲೇಜಿನಲ್ಲಿ ಐಸೊಲೇಷನ್ ವಾರ್ಡ್​ಗಾಗಿ ಸ್ವಯಂಚಾಲಿತ ರೋಬೋಟ್ ಅನ್ನು ಕೊಡುಗೆಯಾಗಿ ನೀಡಲಾಯಿತು.

Robot for COVID19 Wards
ಐಸೋಲೆಷನ್​ ವಾರ್ಡ್​ಗೆ ರೊಬೋಟ್​ ದಾನ.

By

Published : Apr 26, 2020, 5:08 PM IST

ಎರ್ನಾಕುಲಂ(ಕೇರಳ): ಪ್ರತ್ಯೇಕ ವಾರ್ಡ್‌ಗಳಲ್ಲಿರುವ ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಹಾಗೂ ರೋಗಿಗಳೊಂದಿಗಿನ ಆರೋಗ್ಯ ಕಾರ್ಯಕರ್ತರ ಸಂವಹನವನ್ನು ಕಡಿಮೆ ಮಾಡಲು ಇಲ್ಲೊಂದು ರೋಬೋಟ್ ಕಾರ್ಯಪ್ರವೃತ್ತವಾಗಿದೆ.

ಎರ್ನಾಕುಲಂ ಮೆಡಿಕಲ್ ಕಾಲೇಜ್ ಆಸ್ಪತ್ರೆ ಸಿಒವಿಐಡಿ ವಾರ್ಡ್‌ನಲ್ಲಿ ಮಲಯಾಳಂ ನಟ ಮೋಹನ್‌ಲಾಲ್ ಅವರ ವಿಶ್ವಸಾಂಥಿ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಪ್ರತ್ಯೇಕವಾಗಿ ಸೇವೆ ಸಲ್ಲಿಸಲು ಸ್ವಯಂಚಾಲಿತ ರೋಬೋಟ್ ಅನ್ನು ಕೊಡುಗೆಯಾಗಿ ನೀಡಲಾಗಿದೆ.

ರೋಬೋಟ್‌ಗಳ ಬಳಕೆಯು ಆರೋಗ್ಯ ಕಾರ್ಯಕರ್ತರು ಮತ್ತು ಕೊರೊನಾವೈರಸ್ ರೋಗಿಗಳ ನಡುವಿನ ನೇರ ಸಂವಹನವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಆಸ್ಪತ್ರೆಯ ಸಿಬ್ಬಂದಿ ಕೆಲಸದ ಹೊರೆ ಮತ್ತು ಅಪಾಯವನ್ನು ಕಡಿಮೆ ಮಾಡುತ್ತದೆ.

ಐಸೋಲೆಷನ್​ ವಾರ್ಡ್​ಗೆ ರೊಬೋಟ್​ ದಾನ ಮಾಡಿದ ಮೋಹನ್​ ಲಾಲ್​

ಚಲನಚಿತ್ರ ನಿರ್ದೇಶಕ ಮತ್ತು ವಿಶ್ವಸಾಂಥಿ ಫೌಂಡೇಶನ್ ನಿರ್ದೇಶಕ ಮೇಜರ್ ರವಿ ಅವರು ಶನಿವಾರ ಇಲ್ಲಿ ರೋಬೋಟ್ ಅನ್ನು ಜಿಲ್ಲಾಧಿಕಾರಿ ಎಸ್ ಸುಹಾಸ್ ಅವರಿಗೆ ಹಸ್ತಾಂತರಿಸಿದರು.

ಎಎಸ್​​ಐಎಂಒವಿ ರೊಬೊಟಿಕ್ಸ್ ಕಂಪನಿಯು ತಯಾರಿಸಿದ ಕಾರ್ಮಿ-ಬಾಟ್ ಹೆಸರಿನ ಈ ರೋಬೋಟ್‌ನ ಬೆಲೆ 2.5 ಲಕ್ಷ ರೂ. ಕಾರ್ಮಿ-ಬಾಟ್ ಶನಿವಾರದಿಂದ ಆರೋಗ್ಯ ಕಾರ್ಯಕರ್ತರೊಂದಿಗೆ ಕೋವಿಡ್​ ವಾರ್ಡ್‌ಗಳಲ್ಲಿನ ರೋಗಿಗಳ ಜೊತೆ ಹಾಜರಾಗಲಿದೆ.

ಕಾರ್ಮಿ-ಬಾಟ್ ಮುಖ್ಯವಾಗಿ ವಾರ್ಡ್‌ನಲ್ಲಿರುವ ರೋಗಿಗಳಿಗೆ ಆಹಾರ ಮತ್ತು ಇತರ ಅಗತ್ಯಗಳನ್ನು ಪೂರೈಸುವಲ್ಲಿ ನಿರತವಾಗಲಿದೆ ಮತ್ತು ರೋಗಿಗಳು ತಮ್ಮ ಊಟವನ್ನು ಮಾಡಿದ ನಂತರ ಆಹಾರ ತ್ಯಾಜ್ಯವನ್ನು ಸಂಗ್ರಹಿಸಲಿದೆ. ಇದಲ್ಲದೆ, ರೋಗಿಗಳೊಂದಿಗೆ ಸಂವಹನ ನಡೆಸುತ್ತದೆ ಮತ್ತು ಅವರೊಂದಿಗೆ ಬೇರೆ ಏನಾದರೂ ಅಗತ್ಯವಿದ್ದರೆ ದಾದಿಯರು ಅಥವಾ ವೈದ್ಯರಿಗೆ ತಿಳಿಸುತ್ತದೆ.

ಇದು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಕೋವಿಡ್​ ವಾರ್ಡ್‌ಗೆ ಸಂಬಂಧಿಸಿದ ರೋಗಿಯ ವಿವರಗಳು, ಹಾಸಿಗೆಯ ಸಂಖ್ಯೆಗಳು ಮತ್ತು ಇತರ ಮಾಹಿತಿಯನ್ನು ಮ್ಯಾಪ್ ಮಾಡಬಹುದು ಮತ್ತು ರೋಬೋಟ್‌ನಲ್ಲಿ ಹೊಂದಿಸಬಹುದಾಗಿದೆ. ಇದನ್ನು ಮಾಡಿದ ನಂತರ ರೋಗಿಗಳಿಗೆ ತಲುಪಲು ಮತ್ತು ಅವರಿಗೆ ಸೇವೆ ಸಲ್ಲಿಸಲು ಮಾರ್ಗ ಮತ್ತು ಅವಶ್ಯಕತೆಗಳನ್ನು ಇದು ಗ್ರಹಿಸುತ್ತದೆ.

ABOUT THE AUTHOR

...view details