ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗ್ತಾರೆ, ಡಾಕ್ಟರ್ ಮಕ್ಕಳು ಡಾಕ್ಟರ್ ಆಗ್ತಾರೆ ಅನ್ನೋ ಕಾಲ ಯಾವಾಗಲೋ ಹೋಯ್ತು. ಈಗ ಎಲ್ಲವೂ ಬದಲಾಗಿದೆ. ತಂದೆ-ತಾಯಿಗಳ ಕರಿಯರ್ ಬೇರೆ ಇದ್ರೆ ಮಕ್ಕಳು ಬೇರೆ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ತಂದೆ - ತಾಯಿಗೆ ಕೀರ್ತಿ ತಂದ ಮಗ: ನಟ ಮಾಧವನ್ ಪುತ್ರನ ಸಾಧನೆ ಎಂಥಾದ್ದು.? - undefined
ತಮಿಳು ಖ್ಯಾತ ನಟ ಮಾಧವನ್ ಪುತ್ರ ವೇದಾಂತ್ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಸ್ವಿಮ್ಮಿಂಗ್ ಕಾಂಪಿಟೇಷನ್ನಲ್ಲಿ ಮೂರು ಚಿನ್ನದ ಪದಕ ಒಂದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ತಮಿಳಿನ ಖ್ಯಾತ ನಟ ಮಾಧವನ್ ತಾನು ಸಿನಿಮಾ ಕ್ಷೇತ್ರದಲ್ಲಿದ್ದರೂ ಮಗ ಮಾತ್ರ ಇದುವರೆಗೂ ಸಿನಿಮಾಗಳತ್ತ ಮುಖ ಮಾಡಿಲ್ಲ. ಅವರ ಪುತ್ರ ವೇದಾಂತ್ ಉತ್ತಮ ಕ್ರೀಡಾಪಟು. ಇತ್ತೀಚೆಗೆ ವೇದಾಂತ್ ರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಕಾಂಪಿಟೇಷನ್ನಲ್ಲಿ ಮೂರು ಚಿನ್ನದ ಪದಕಗಳು ಒಂದು ಬೆಳ್ಳಿಪದಕ ಗೆದ್ದಿದ್ದಾರೆ. ತಮ್ಮ ಪುತ್ರನ ಸಾಧನೆಯನ್ನು ಮಾಧವನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
'ದೇವರ ಆಶೀರ್ವಾದದಿಂದ ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ವೇದಾಂತ್ ಮತ್ತೊಮ್ಮೆ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾನೆ. ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಸ್ವಿಮ್ಮಿಂಗ್ ಕಾಂಪಿಟೇಷನ್ನಲ್ಲಿ ನನ್ನ ಮಗ 3 ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಪಡೆದಿದ್ದಾನೆ. ಇನ್ಮುಂದೆ ಏಷ್ಯನ್ ಗೇಮ್ನತ್ತ ಗಮನ ಹರಿಸುತ್ತಿದ್ದಾನೆ. ಎಲ್ಲ ತರಬೇತುದಾರರಿಗೆ, ತಂಡದ ಸದಸ್ಯರಿಗೆ ಧನ್ಯವಾದ' ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ. ವೇದಾಂತ್ ಸಾಧನೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಸೇರಿದಂತೆ ಬಹಳಷ್ಟು ಸೆಲಬ್ರಿಟಿಗಳು ಖುಷಿ ವ್ಯಕ್ತಪಡಿಸಿ ವಿಶ್ ಮಾಡಿದ್ದಾರೆ.