ಜೈಪುರ : ಉರಿ ಬಿಸಿಲಿನಲ್ಲಿ ಬರಿಗಾಲಲ್ಲಿ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಜೈಪುರ ಎಸಿಪಿ ಅವರು ಚಪ್ಪಲಿ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಬರಿಗಾಲಲ್ಲಿ ನಡೆಯುತ್ತಿದ್ದ ಕಾರ್ಮಿಕರಿಗೆ ಚಪ್ಪಲಿ ವಿತರಿಸಿ ಮಾನವೀಯತೆ ಮೆರೆದ ಜೈಪುರ ಎಸಿಪಿ - ಮಾನವೀಯತೆ ಮೆರೆದ ಜೈಪುರ ಎಸಿಪಿ
ಲಾಕ್ ಡೌನ್ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದೆ ಊರು ಸೇರಲು ನೂರಾರು ಕಿ.ಮೀ ಬರಿಗಾಲಲ್ಲೇ ನಡೆಯುತ್ತಿದ್ದ ವಲಸೆ ಕಾರ್ಮಿಕರಿಗೆ ಚಪ್ಪಲಿ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿ ಜೈಪುರ ಎಸಿಪಿ ಮಾನವೀಯತೆ ಮೆರೆದಿದ್ದಾರೆ.
ಬರಿಗಾಲಲ್ಲಿ ನೂರಾರು ಕಿ.ಮೀ ನಡೆದು ಕಾಲು ನೋವಿನಿಂದ ಬಳಲುತ್ತಿದ್ದವರಿಗೆ ಎಸಿಪಿ ಪುಷ್ಪಿಂದರ್ ಸಿಂಗ್ ಚಪ್ಪಲಿ , ನೀರು, ಬಟ್ಟೆ ಮತ್ತು ಬಿಸ್ಕತ್ ವಿತರಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಾರ್ಮಿಕರು ಚಪ್ಪಲಿ ಮತ್ತು ಆಹಾರವಿಲ್ಲದೆ ಕಿ.ಮೀ ಗಟ್ಟಲೆ ನಡೆಯುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ನೋಡಿ ನಾವು ಸಹಾಯ ಮಾಡಲು ಮುಂದಾಗಿದ್ದು, ಶೂ, ಚಪ್ಪಲಿ, ನೀರು, ಬಿಸ್ಕತ್, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿದ್ದೇವೆ. ಜೊತೆಗೆ ಕಾರ್ಮಿಕರಿಗೆ ಅವರ ರಾಜ್ಯದ ಗಡಿವರೆಗೆ ತೆರಳಲು ವಾಹನ ಸೌಲಭ್ಯ ಮಾಡಿಕೊಟ್ಟಿದ್ದೇವೆ. ಜೊತೆಗೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರಿಗೆ ಆರೋಗ್ಯ ತಪಾಸಣೆಯನ್ನೂ ಮಾಡಿಸಿದ್ದೇವೆ. ಹೆಚ್ಚಿನ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕಡೆಗೆ ತೆರಳುತ್ತಿದ್ದರು ಎಂದಿದ್ದಾರೆ.