ಕರ್ನಾಟಕ

karnataka

ETV Bharat / bharat

ಏರ್​ಸ್ಟ್ರೈಕ್​ ಪಾಕಿಸ್ತಾನಕ್ಕೆ ಉಭಯ ಸಂಕಟ ತಂದೊಡ್ಡಿದೆ: ಪ್ರಧಾನಿ ಮೋದಿ - ಪಾಕಿಸ್ತಾನ

ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಿಂದ ಪಾಕಿಸ್ತಾನಕ್ಕೆ ಉಭಯ ಸಂಕಟ ಉಂಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತದ ದಾಳಿಯಿಂದ ಪಾಕ್​ಗೆ ಉಭಯಸಂಕಟ ಎಂದ ಪ್ರಧಾನಿ ನರೇಂದ್ರ ಮೋದಿ

By

Published : Mar 31, 2019, 9:24 PM IST

ನವದೆಹಲಿ: ಪಾಕ್ ಆಕ್ರಮಿತ ಪ್ರದೇಶ ಬಾಲಕೋಟ್​ನಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಿಂದ ಪಾಕಿಸ್ತಾನ ಉಭಯ ಸಂಕಟ ಅನುಭವಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೈ ಬಿ ಚೌಕಿದಾರ್​ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ​ ಬಾಲಕೋಟ್​ನಲ್ಲಿ ಏನಾದರೂ ಆಗಿದೆ ಎಂದು ಹೇಳಿದರೆ ಅಲ್ಲಿ ಉಗ್ರ ನೆಲೆಗಳಿದ್ದವು ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಅದಕ್ಕಾಗಿ ಅಲ್ಲಿ ಏನೂ ಇಲ್ಲವೆಂದು ಪಾಕಿಸ್ತಾನ ಈ ಜಗತ್ತಿಗೆ ಹೇಳುತ್ತಿದೆ. ಆದರೆ ನಾವು ದಾಳಿ ಮಾಡಿದ ಜಾಗಗಳನ್ನು ಅದು ಮುಚ್ಚಿಡಲಾದೀತೆ ಎಂದು ಕುಟುಕಿದರು.

ನಾನು ಏರ್​ಸ್ಟ್ರೈಕ್​ ಮಾಡಲಿಲ್ಲ. ನಮ್ಮ ಯೋಧರು ಆ ವೀರ ಕೆಲಸ ಮಾಡಿದರು. ಸೇನೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದ್ದುದ್ದರಿಂದಲೇ ಅವರಿಗೆ ದಾಳಿಯ ಆದೇಶ ಮಾತ್ರ ನೀಡಿದ್ದೆ. ಯೋಧರಿಗೆ ನನ್ನ ಸೆಲ್ಯೂಟ್​ ಎಂದರು.

40 ವರ್ಷಗಳಿಂದ ನಾವು ಭಯೋತ್ಪಾದನೆಯಿಂದ ನೋವು ಅನುಭವಿಸಿದೆವು. ಉಗ್ರರು ದೇಶದೊಳಗೆ ನುಸುಳಿ ಬಂದು ಮುಂಬೈ, ಉರಿಯಲ್ಲಿ ನರಮೇಧ ನಡೆಸಿದರು. ಇದೆಕ್ಕೆಲ್ಲಾ ಜವಾಬ್ದಾರಿ ಯಾರೆಂದು ನಮಗೆ ಗೊತ್ತು. ಅವರ ವಿರುದ್ಧ ಸಮರ ಸಾರಲು ಅಂದೇ ನಿರ್ಧರಿಸಿದ್ದೇ ಎಂದು ಮೋದಿ ಹೇಳಿದರು.

ಬಾಲಕೋಟ್​ ದಾಳಿ ನಡೆದ ಒಂದೂವರೆ ತಿಂಗಳವರೆಗೆ ಪಾಕ್​ ಯಾರನ್ನೂ ಆ ಪ್ರದೇಶಕ್ಕೆ ಬಿಡುತ್ತಿರಲಿಲ್ಲ. ಕೆಲವರು ಹೇಳುವಂತೆ, ಅವರು ಆ ಪ್ರದೇಶವನ್ನು ಪುನರ್​ ನಿರ್ಮಾಣ ಮಾಡುತ್ತಿದ್ದಾರೆ. ಉಗ್ರರ ತರಬೇತಿ ಕೇಂದ್ರಗಳಿದ್ದರೂ ಅಲ್ಲಿ ಶಾಲೆ ನಡೆಯುತ್ತಿತ್ತು ಎಂದು ಪಾಕಿಸ್ಸುತಾನ ಸುಳ್ಳು ಹೇಳುತ್ತಿದೆ.ಪಾಕ್​ಗೆ ಎಷ್ಟು ಮಂದಿ ಉಗ್ರರು ಸತ್ತರು ಎಂಬುದು ಸಮಸ್ಯೆಯಲ್ಲ. ಆದ್ರೆ ಅವರ ಅಡಗುತಾಣಗಳು ಅಲ್ಲಿದ್ದವು ಎಂದು ಒಪ್ಪಿಕೊಳ್ಳುವುದೇ ಸಮಸ್ಯೆ ಎಂದು ಮೋದಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದರು.

ABOUT THE AUTHOR

...view details