ಗುಂಟೂರು (ಆಂಧ್ರಪ್ರದೇಶ):ಸಾಲ ತೀರಿಸಲುಯೂಟ್ಯೂಬ್ ನೋಡಿ ಬ್ಯಾಂಕ್ ದರೋಡೆ ಮಾಡಿದ್ದ ಚಾಲಾಕಿ ಕಳ್ಳರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 21 ರಂದು ಇಬ್ಬರು ದಾಚಪಲ್ಲಿ ಪ್ರದೇಶದ ನಾಡಿಕುಡಿ ಎಸ್ಬಿಐ ಬ್ಯಾಂಕ್ ನಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಕೈಗೆತ್ತಿಕೊಂಡ ಆಂಧ್ರದ ಗುಂಟೂರು ಪೊಲೀಸರು, ತೆಲಂಗಾಣದ ಮಿರಿಯಲಗುಡ ಮೂಲದ ಕೇದಾರಿ ಪ್ರಸಾದ್ ಮತ್ತು ವಿನಯ್ ರಾಮು ರನ್ನು ಬಂಧಿಸಿದ್ದಾರೆ. ಬಂಧಿತರಿಂದ 77 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಸಾಲ ತೀರಿಸಲು ಯೂಟ್ಯೂಬ್ ನೋಡಿ ಬ್ಯಾಂಕ್ ದರೋಡೆ..ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ ಬಳಿಕ ಮಾತನಾಡಿದ ಎಸ್ಪಿ ವಿಶಾಲ್ಗುನ್ನಿ ದಿಶಾ, ಇವರಿಬ್ಬರು ಸಣ್ಣಪುಟ್ಟ ಕಳ್ಳತನ ಮಾತ್ರ ಮಾಡುತ್ತಿದ್ದರು. ಸಾಲಗಳಿಂದ ಮುಕ್ತರಾಗಲು ಯೂಟ್ಯೂಬ್ ನಲ್ಲಿ ಚಿತ್ರ ನೋಡಿಕೊಂಡು ಕಳ್ಳತನ ಮಾಡಿದ್ದಾರೆ ಎಂದರು. ಅಲ್ಲದೆ, ಸಿಕ್ಕಿಬೀಳದಂತೆ, ಸಿಸಿಟಿವಿ ಸಂಪರ್ಕ ಕಡಿತಗೊಳಿಸಿದ್ದಾರೆ. ಮಾಸ್ಕ್ ಧರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಈ ದುಷ್ಕೃತ್ಯ ಎಸಗಿದ್ದಾರೆ. ಆರೋಪಿಗಳ ಬಂಧನಕ್ಕಾಗಿ 8 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಇದು ಇಡೀ ದೇಶದಲ್ಲಿ ನಡೆದಿರುವ ಬ್ಯಾಂಕ್ ದರೋಡೆಗಳಲ್ಲಿ ಒಂದಾಗಿ ಎಂದು ಎಸ್ಪಿ ಹೇಳಿದ್ದಾರೆ.
ಕಳ್ಳತನ ಮಾಡುವ ವೇಳೆ ಅವರ ಜೇಬಿನಲ್ಲಿದ್ದ ಮೊಬೈಲ್ ರೀಚಾರ್ಜ್ ಸ್ಲಿಪ್ ಕೆಳಗೆ ಬಿದ್ದಿದೆ. ಅದನ್ನು ಗಮನಿಸದೆ, ಆರೋಪಿಗಳು ಹಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಅಷ್ಟೊಂದು ಹಣವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕೆಂದು ದಿಕ್ಕು ತೋಚದೆ, ಹಣ ಮರೆ ಮಾಚಲು ಮತ್ತೊಬ್ಬ ದರೋಡೆಕೋರನ ಸಹಾಯ ಪಡೆದಿದ್ದಾರೆ. ಅವನ ಸಹಾಯ ಪಡೆದು ಸರ್ವಿಸ್ ರಸ್ತೆ ಮೂಲಕ ಹಾದು ಸುಬ್ಬಮ್ಮ ಹೋಟೆಲ್ ಹಿಂಭಾಗದ ಸ್ಮಶಾನದಲ್ಲಿ 45 ಲಕ್ಷ ರೂಪಾಯಿಯನ್ನು ಬಚ್ಚಿಟ್ಟಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಆ ಹಣವನ್ನು ತೆಗೆದುಕೊಂಡು ಹೋಗಲು ಪ್ಲ್ಯಾನ್ ಮಾಡಿದ್ದರಂತೆ.
ಆದರೆ, ಪೊಲೀಸರು ಆ ವೇಳೆಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳ ಜಾಲ ಭೇದಿಸಿದ್ದಾರೆ.