ತೆಲಂಗಾಣ:ಬರೋಬ್ಬರಿ 4.47 ಕೋಟಿ ರೂ. ಅಕ್ರಮ ಹಣ ವಶಪಡಿಸಿಕೊಳ್ಳುವಲ್ಲಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಯಶಸ್ವಿಯಾಗಿದೆ. ವೈದ್ಯಕೀಯ ವಿಮಾ ಸೇವೆಗಳ ಮಾಜಿ ನಿರ್ದೇಶಕಿ(ಐಎಂಎಸ್) ಹಾಗೂ ಮತ್ತೋರ್ವ ಅಧಿಕಾರಿಗೆ ಸೇರಿರುವ ಅಕ್ರಮ ಹಣ ಇದಾಗಿದೆ ಎನ್ನಲಾಗಿದೆ.
ತೆಲಂಗಾಣದಲ್ಲಿ 4.47 ಕೋಟಿ ರೂ. ಅಕ್ರಮ ಹಣ ವಶಪಡಿಸಿಕೊಂಡ ಎಸಿಬಿ!
ತೆಲಂಗಾಣದಲ್ಲಿ 4.47 ಕೋಟಿ ರೂ. ಹಣ ವಶಪಡಿಸಿಕೊಳ್ಳುವಲ್ಲಿ ತೆಲಂಗಾಣ ಎಸಿಬಿ ಯಶಸ್ವಿಯಾಗಿದ್ದಾರೆ.
ದೇವಿಕಾ ರಾಣಿಯವರಿಗೆ ಸೇರಿದ್ದ ಆಧಾರರಹಿತ 3.75 ಕೋಟಿ ರೂ. ಹಾಗೂ ಇಎಸ್ಐ ಫಾರ್ಮಸಿಸ್ಟ್ ನಾಗ ಲಕ್ಷಿ ಅವರಿಗೆ ಸೇರಿದ್ದ 72 ಲಕ್ಷ ರೂ ಇದಾಗಿದೆ. ಸೈಬರಾಬಾದ್ ಪ್ರದೇಶದ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ವಾಣಿಜ್ಯ ಮತ್ತು ವಸತಿ ಸ್ಥಳಗಳ ಖರೀದಿಗಾಗಿ ಹೂಡಿಕೆ ಮಾಡಲಾಗಿತ್ತು ಎನ್ನಲಾಗಿದೆ.
ಯಾವುದೇ ರೀತಿಯ ದಾಖಲಾತಿ ಇಲ್ಲದ ಈ ಹಣ ಆರು ವಸತಿ ಫ್ಲ್ಯಾಟ್ ಖರೀದಿಗೆ ಬಳಕೆ ಮಾಡಲಾಗುತ್ತಿತ್ತು. ಇಲ್ಲಿ ನಡೆದಿರುವ ಔಷಧಾಲಯಗಳು ಮತ್ತು ಆಸ್ಪತ್ರೆಗಳಲ್ಲಿನ ಔಷಧಿ ಸರಬರಾಜಿನಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದ್ದು, ಇದರ ತನಿಖೆ ಎಸಿಬಿಯಿಂದ ನಡೆಯುತ್ತಿದೆ. ಈಗಾಗಲೇ ದೇವಿಕಾ ರಾಣಿ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು 2019ರ ಸೆಪ್ಟೆಂಬರ್ ತಿಂಗಳಲ್ಲಿ ಬಂಧನ ಮಾಡಲಾಗಿದೆ.