ನವದೆಹಲಿ: ಮುಖವಾಡ ಧರಿಸಿಕೊಂಡು ಜೆಎನ್ಯು ಕ್ಯಾಂಪಸ್ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಹಲ್ಲೆ ನಡೆಸಿರುವ ಪ್ರಕರಣ ರಾಜಕೀಯ ರಂಗು ಪಡೆಯುತ್ತಿದೆ.
ಜೆಎನ್ಯು ಕ್ಯಾಂಪಸ್ನಲ್ಲಿ ಹಲ್ಲೆ ಪ್ರಕರಣ: ABVP ಮತ್ತು SU ಆರೋಪ-ಪ್ರತ್ಯಾರೋಪ - ಜೆಎನ್ಯು ಕ್ಯಾಂಪಸ್ನಲ್ಲಿ ಹಲ್ಲೆ ಪ್ರಕರಣ
ನವದೆಹಲಿಯ ಜೆಎನ್ಯು ಕ್ಯಾಂಪಸ್ಗೆ ನುಗ್ಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ರಾಜಕೀಯ ರಂಗು ಪಡೆಯುತ್ತಿದೆ. ಈ ಹಲ್ಲೆಯ ಹಿಂದೆ ABVP ಕೈವಾಡವಿದೆ ಎಂದು JNUSU ಆರೋಸಿದರೆ, ಇದು JNUSU ಕೈವಾಡವೆಂದು ABVP ಪ್ರತ್ಯಾರೋಪ ಮಾಡಿದೆ.
ಜೆಎನ್ಯು ಕ್ಯಾಂಪಸ್ನಲ್ಲಿ ಹಲ್ಲೆ ಪ್ರಕರಣ
ಭಾನುವಾರ ಸಂಜೆ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್ಗೆ ನುಗ್ಗಿದ್ದ ದುಷ್ಕರ್ಮಿಗಳ ಗುಂಪೊಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹಲ್ಲೆ ನಡೆಸಿತ್ತು. ಈ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ದೆಹಲಿ ಎಬಿವಿಪಿ, ಹಲ್ಲೆಗೆ ಎಡಪರ ಸಂಘಟನೆಗಳಾದ SFI, AISA, ಹಾಗೂ DSF ಕಾರಣ ಎಂದು ಆರೋಪಿಸಿದೆ.
ಇನ್ನೊಂದೆಡೆ ಇದನ್ನು ಅಲ್ಲಗಳೆದಿರುವ ಜೆಎನ್ಯು ವಿದ್ಯಾರ್ಥಿ ಸಂಘಟನೆ, ಈ ಹಲ್ಲೆಯ ಹಿಂದೆ ಎಬಿವಿಪಿ ವಿದ್ಯಾರ್ಥಿಗಳ ಕೈವಾಡವಿದೆ ಎಂದು ಆರೋಪಿಸಿದೆ.