ಕರ್ನಾಟಕ

karnataka

ETV Bharat / bharat

370 ನೇ ವಿಧಿ ರದ್ದು: ಜಮ್ಮು& ಕಾಶ್ಮೀರದಲ್ಲಿ ಹೇಗಿದೆ ಪರಿಸ್ಥಿತಿ? - Jammu kashmir news

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ಕಣಿವೆ ರಾಜ್ಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.

370ನೇ ವಿಧಿ ರದ್ದು: ಜಮ್ಮು& ಕಾಶ್ಮೀರದಾದ್ಯಂತ ಬೀಗಿ ಭದ್ರತೆ

By

Published : Aug 6, 2019, 9:46 AM IST

Updated : Aug 6, 2019, 11:03 AM IST

ಜಮ್ಮುಕಾಶ್ಮೀರ: ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರದ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರ ಮತ್ತು ಲಡಾಕ್‌ ಇನ್ನು ಮುಂದೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಲಿದೆ. ಇನ್ನೊಂದೆಡೆ ಕಣಿವೆ ರಾಜ್ಯದಲ್ಲಿ ಅಹಿತಕರ ಘಟನಾವಳಿಗಳನ್ನು ನಿಯಂತ್ರಿಸುವ ಸಲುವಾಗಿ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

370ನೇ ವಿಧಿ ರದ್ದು: ಜಮ್ಮು& ಕಾಶ್ಮೀರದಾದ್ಯಂತ ಬೀಗಿ ಭದ್ರತೆ

ಸರ್ಕಾರಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಸದ್ಯ ಜಮ್ಮುಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಜನ ಜೀವನ ಸುಗಮವಾಗಿದ್ದು, ಯಾವುದೇ ರೀತಿಯ ಸಮಸ್ಯೆಗಳು ಎದುರಾಗಿಲ್ಲ. ಹೀಗಾಗಿ ಸಾರ್ವಜನಿಕರು ನಿರಾತಂಕವಾಗಿರುವಂತೆ ಭರವಸೆ ನೀಡಲಾಗಿದೆ.

ಕಣಿವೆ ರಾಜ್ಯದಲ್ಲಿ ಆಹಾರ ಪೂರೈಕೆಗಿಲ್ಲ ತೊಂದರೆ:

ಮೂರು ತಿಂಗಳಿಗೂ ಹೆಚ್ಚು ಸಮಯಕ್ಕಾಗುವಷ್ಟು ಆಹಾರ ದಾಸ್ತಾನು ರಾಜ್ಯದಲ್ಲಿದೆ ಎಂದು ಯೋಜನಾ ಆಯೋಗದ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ ಬೇಕಾಗುವಷ್ಚು ಗೋಧಿ, ಅಕ್ಕಿ, ಕುರಿ ಮಾಂಸ, ಮೊಟ್ಟೆ ಹಾಗು ಇಂಧನ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಜೊತೆಗೆ ನಾಗರಿಕರಿಗೆ ಆಹಾರ ಪದಾರ್ಥಗಳ ಪೂರೈಕೆಯನ್ನೂ ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರದಲ್ಲಿದ್ದಾರೆ ಅಜಿತ್ ಧೊವಾಲ್:

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಶ್ರೀನಗರದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

ಗೃಹ ಬಂಧನದಲ್ಲಿದ್ದಾರೆ ಮುಫ್ತಿ, ಓಮರ್:

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಮತ್ತು ಓಮರ್ ಅಬ್ದುಲ್ಲಾ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ಗೃಹಬಂಧನದಲ್ಲಿಟ್ಟಿದ್ದಾರೆ. ಇಬ್ಬರೂ ಮುಖಂಡರೂ 370 ವಿಧಿ ರದ್ದತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಫೋನ್, ಇಂಟರ್‌ನೆಟ್‌ ಸ್ಥಗಿತ:

ವಿಶೇಷ ಸ್ಥಾನಮಾನ ರದ್ದತಿ ಕಾರಣ ಸಂವಹನ ಸೌಲಭ್ಯಗಳೆಲ್ಲಾ ರದ್ದಾಗಿವೆ. ಮೊಬೈಲ್‌ ಫೋನ್ ಹಾಗು ಇಂಟರ್ ನೆಟ್‌ ಸೌಲಭ್ಯಗಳನ್ನು ಬ್ಲಾಕ್ಔಟ್‌ ಮಾಡಿದ್ದಾರೆ.

Last Updated : Aug 6, 2019, 11:03 AM IST

ABOUT THE AUTHOR

...view details