ಮುಂಬೈ(ಮಹಾರಾಷ್ಟ್ರ):ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ ನನಗೆ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುವ ಮತ್ತೊಂದು ಅವಕಾಶವನ್ನು ಸಿಕ್ಕರೆ ನಿರಾಕರಿಸುವೆ ಎಂದಿದ್ದಾರೆ. ಹಾಗಂತಾ, ಅವರಿಬ್ಬರ ನಡುವೆ ಯಾವ ಮುನಿಸೂ ಇಲ್ಲ. ಹಾಗಾದ್ರೆ ಕಾರಣ?.
ಮತ್ತೊಂದು ಅವಕಾಶ ಸಿಕ್ಕರೆ ಆಮೀರ್ ಜತೆ ನಟಿಸೋದಿಲ್ವಂತೆ ಅಭಿಷೇಕ್.. ಯಾಕೆಂದು ಹೇಳಿದ್ದಾರೆ ಅವ್ರೇ.. - ಬಾಲಿವುಡ್ ನಟ ಆಮೀರ್ ಖಾನ್
ಬಾಲಿವುಡ್ ನಲ್ಲಿ ಸಾಧನೆಯ ಉತ್ತುಂಗ ಏರುತ್ತಿದ್ದರು ಆಮೀರ್ ಬಹಳ ಸರಳ ವ್ಯಕ್ತಿತ್ವ ಹೊಂದಿರುವವರು. ಕೆಲಸದಲ್ಲಿ ತುಂಬಾ ಶ್ರದ್ಧೆ ಹೊಂದಿರುವ ಅವರು ತಮ್ಮ ಸಹ ನಟರನ್ನು ಆತ್ಮೀಯವಾಗಿ ಕಾಣುತ್ತಾರೆ. ನಟನೆಯಲ್ಲೆ ನಿಪುಣರಾಗಿರುವ ಇವರ ನಿರ್ದೇಶನ ಕೂಡ ಅದ್ಭುತವಾಗಿರುತ್ತದೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ನಟ ಅಭಿಷೇಕ್ ಬಚ್ಚನ್..
ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರಿಂದಿಗೆ ನಟಿಸಲು ಮನಸಿಲ್ಲ, ಬದಲಿಗೆ ಅವರ ನಿರ್ದೇಶನದಲ್ಲಿ ನಟಿಸುವ ಆಸೆಯಿದೆ ಎಂದು ತಮ್ಮ ಇಚ್ಛೆಯನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬಹಿರಂಗಪಡಿಸಿದ್ದಾರೆ. ಆಮೀರ್ ಜೊತೆ 2013ರಲ್ಲಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿರುವ ಅಭಿಷೇಕ್ ಅದನ್ನು 'ಒನ್ಸ್ ಇನ್ ಲೈಫ್ ಟೈಮ್' ಅಂದರೆ ಜೀವಿತಾವಧಿಯಲ್ಲಿ ಒಮ್ಮೆ ಬರುವ ಸದಾವಕಾಶ ಎಂದು ಉಲ್ಲೇಖಿಸಿದ್ದಾರೆ.
ಬಾಲಿವುಡ್‌ನಲ್ಲಿ ಸಾಧನೆಯ ಉತ್ತುಂಗ ಏರುತ್ತಿದ್ದರು ಆಮೀರ್ ಬಹಳ ಸರಳ ವ್ಯಕ್ತಿತ್ವ ಹೊಂದಿರುವವರು. ಕೆಲಸದಲ್ಲಿ ತುಂಬಾ ಶ್ರದ್ಧೆ ಹೊಂದಿರುವ ಅವರು ತಮ್ಮ ಸಹ ನಟರನ್ನು ಆತ್ಮೀಯವಾಗಿ ಕಾಣುತ್ತಾರೆ. ನಟನೆಯಲ್ಲೇ ನಿಪುಣರಾಗಿರುವ ಇವರ ನಿರ್ದೇಶನ ಕೂಡ ಅದ್ಭುತವಾಗಿರುತ್ತದೆ ಎಂಬ ನಂಬಿಕೆಯಿದೆ. ಒಂದು ವೇಳೆ ಅವರು ನನ್ನ ಪೋಸ್ಟ್ ನೋಡುತ್ತಿದ್ದರೆ !!! ಆಮೀರ್ ನನ್ನ ವಿನಂತಿಯನ್ನು ದಯಮಾಡಿ ಪರಿಗಣಿಸಿ ಎಂದು ಗಜಿನಿಯ ನಿರ್ದೇಶನದಲ್ಲಿ ಕೆಲಸ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.