ನವದೆಹಲಿ:ಪುಲ್ವಾಮಾ ಉಗ್ರ ದಾಳಿಯ ಬಳಿಕ ಉಭಯ ದೇಶಗಳ ಗಡಿ ಭಾಗದಲ್ಲಿ ಉಂಟಾಗಿದ್ದ ಯುದ್ಧ ಭೀತಿಯ ಸಂದರ್ಭದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದ ಪೈಲಟ್ ಅಭಿನಂದನ್ ವರ್ಧಮಾನ್ರಿಗೆ ಮಿಲಿಟರಿ ಗೌರವ ನೀಡಲು ಸರ್ಕಾರ ತೀರ್ಮಾನಿಸಿದೆ.
ಶತ್ರು ರಾಷ್ಟ್ರದ ಬಲಿಷ್ಠ ಯುದ್ಧ ವಿಮಾನ ನೆಲಕ್ಕುರುಳಿಸಿ ನಂತರದಲ್ಲಿ ಆ ರಾಷ್ಟ್ರಕ್ಕೆ ಅಚಾನಕ್ಕಾಗಿ ಪ್ರವೇಶಿಸಿ ಅಲ್ಲಿ ಕೆಲ ದಿನ ಬಂಧಿಯಾಗಿದ್ದರು. ಆದರೂ ಭಾರತದ ಯಾವುದೇ ರಹಸ್ಯ ಮಾಹಿತಿಯನ್ನು ಬಿಟ್ಟುಕೊಡದೆ ದಿಟ್ಟತನ ಮೆರೆದಿದ್ದರು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಅಭಿನಂದನ್ಗೆ ವೀರ ಚಕ್ರ ನೀಡಿ ಗೌರವಿಸಲು ಮುಂದಾಗಿದೆ.