ನವದೆಹಲಿ:ಕಳೆದ ಸೋಮವಾರ ಅರ್ಥಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ ಭಾರತ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, 10 ದಿನ ಏಷ್ಯಾದ ಅತಿದೊಡ್ಡ ಜೈಲಿನಲ್ಲಿ ಕೈದಿಯಾಗಿದ್ದರಂತೆ!
ಹೌದು, ಜೆಎನ್ಯುನಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಭಿಜಿತ್ ಬ್ಯಾನರ್ಜಿ, 10 ದಿನ ಜೈಲಿನಲ್ಲಿ ತಿಹಾರ್ ಜೈಲಿನಲ್ಲಿ ಬಂಧಿಯಾಗುವ ಮೂಲಕ ಶಿಕ್ಷೆ ಅನುಭವಿಸಿದ್ದರಂತೆ.
ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ಹೊರಹಾಕಿದ್ದಕ್ಕಾಗಿ, ವಿವಿಯ ಆಗಿನ ಉಪಕುಲಪತಿಗಳಿಗೆ ಅವರ ಮನೆಯಲ್ಲೇ ಘೇರಾವ್ ಹಾಕಿದ ವಿದ್ಯಾರ್ಥಿಗಳ ಗುಂಪಿನಲ್ಲಿ ಬ್ಯಾನರ್ಜಿ ಕೂಡಾ ಇದ್ದರು. ಹೀಗಾಗಿ ಇವರನ್ನು ಬಂಧಿಸಿ ತಿಹಾರ್ ಜೈಲಿಗೆ ಕಳಿಸಲಾಗಿತ್ತು.
ನೋಟ್ ಬ್ಯಾನ್ ನಿಷೇಧಕ್ಕೆ ಭಾರೀ ಟೀಕೆ... ನೊಬೆಲ್ ಪುರಸ್ಕೃತ ಬ್ಯಾನರ್ಜಿ ಬಗ್ಗೆ ನಿಮಗೇನು ಗೊತ್ತು!?
ಪ್ರಸ್ತುತ ಅಭಿಜಿತ್ ಬ್ಯಾನರ್ಜಿ, ಅಮೆರಿಕಾದ ಕೇಂಬ್ರಿಡ್ಜ್ನಲ್ಲಿರುವ ಎಂಐಟಿ(ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಅರ್ಥಕ್ಷೇತ್ರದಲ್ಲಿ ಇವರ ಸಾಧನೆ ಗುರುತಿಸಿ ನೊಬೆಲ್ ಪಾರಿತೋಷಕ ನೀಡಿ ಗೌರವಿಸಲಾಗಿದೆ.