ಕರ್ನಾಟಕ

karnataka

ETV Bharat / bharat

ಅಬ್ದುಲ್ ಕರೀಮ್ ತುಂಡಾಗೆ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ - undefined

ಎಲ್‌ಇಟಿ ಬಾಂಬ್ ತಜ್ಞ ಶಂಕಿತ ತುಂಡಾನನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಎಂದು ಎಂಎಂಜಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನಲೆ ಜಿಲ್ಲಾ ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ.

ಅಬ್ದುಲ್ ಕರೀಮ್ ತುಂಡಾ

By

Published : Jul 11, 2019, 11:31 AM IST

ಗಾಜಿಯಾಬಾದ್(ಉತ್ತರ ಪ್ರದೇಶ):ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ ಮತ್ತು ದೇಶದಲ್ಲಿ 40 ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್ ಸೈಯದ್ ಅಬ್ದುಲ್ ಕರೀಮ್ ಅಲಿಯಾಸ್ ತುಂಡಾ ಬುಧವಾರ ಎಂಎಂಜಿ ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.

ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿರುವ ತುಂಡಾನನ್ನು ಜೈಲಿನ ಆಡಳಿತವು ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಆಸ್ಪತ್ರೆಯ ಖಾಸಗಿ ವಾರ್ಡ್‌ನಲ್ಲಿ ದಾಖಲಿಸಿದೆ.

ಈ ಬಗ್ಗೆ ಮಾತನಾಡಿದ ನಗರ ಎಸ್ಪಿ ಶ್ಲೋಕ್ ಕುಮಾರ್ "ತುಂಡಾನನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ. ಜೊತೆಗೆ ಜಿಲ್ಲಾ ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಪೊಲೀಸ್ ಸಿಬ್ಬಂದಿ ಮತ್ತು ಪ್ರಾಂತೀಯ ಸಶಸ್ತ್ರ ಕಾನ್ಸ್ಟೇಬುಲರಿ (ಪಿಎಸಿ) ದಳವನ್ನು ನಿಯೋಜಿಸಲಾಗಿದೆ" ಎಂದು ಕುಮಾರ್ ಹೇಳಿದರು.

ಎಲ್‌ಇಟಿ ಬಾಂಬ್ ತಜ್ಞ ಶಂಕಿತ ತುಂಡಾನನ್ನು ಆಗಸ್ಟ್ 16, 2013 ರಂದು ಇಂಡೋ - ನೇಪಾಳ ಗಡಿ ಪ್ರದೇಶ ಬನ್‌ಬಾಸಾದಲ್ಲಿ ಬಂಧಿಸಲಾಯಿತು. ಅಷ್ಟೇ ಅಲ್ಲದೆ, ದೇಶಾದ್ಯಂತ ಇತರ ಕೆಲವು ಸ್ಫೋಟ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದಾನೆಂದು ಶಂಕಿಸಲಾಗಿದೆ.

For All Latest Updates

TAGGED:

ABOUT THE AUTHOR

...view details