ಕರ್ನಾಟಕ

karnataka

By

Published : May 11, 2020, 3:17 PM IST

ETV Bharat / bharat

ಕನ್ನಡ, ಹಿಂದಿ, ಇಂಗ್ಲೀಷ್​​ ಸೇರಿದಂತೆ 11 ಭಾಷೆಗಳಲ್ಲಿ ಆರೋಗ್ಯ ಸೇತು ಆ್ಯಪ್​​​

ಆರೋಗ್ಯ ಸೇತುವಿನಲ್ಲಿ ಬಹುಭಾಷೆಯನ್ನು ಅಳವಡಿಸಲಾಗಿದೆ. ಟ್ರ್ಯಾಗ್​ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗಿದ್ದು ಬ್ಲೂಟೂತ್​​​, ಜಿಪಿಎಸ್​​​​ ದಿನವೂ ಚಾಲನೆಯಲ್ಲಿ ಇರಬೇಕು.

Aarogya Setu, A Multilingual Covid-19 tracking App launched by the government
ಆರೋಗ್ಯ ಸೇತು

ನವದೆಹಲಿ: 'ಆರೋಗ್ಯ ಸೇತು'​​. ಕೊರೊನಾ ಸೋಂಕಿತರ, ಶಂಕಿತರ ಚಲನವಲನ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ ಜಿಪಿಎಸ್ ತಂತ್ರಜ್ಞಾನ ಆಧಾರಿತ ಮೊಬೈಲ್​ ಆ್ಯಪ್. ​​​​ ​

ಈ ಆ್ಯಪ್ ಅನ್ನು​ ಕೇಂದ್ರ ಸರ್ಕಾರ ಮತ್ತಷ್ಟು ಅಭಿವೃದ್ಧಿಪಡಿಸಿದ್ದು ಕನ್ನಡ, ತೆಲುಗು, ಹಿಂದಿ ಇಂಗ್ಲೀಷ್​ ಸೇರಿದಂತೆ 11 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಸೋಂಕು ಹರಡುವ, ಮುಂಜಾಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ ಸೇರಿದಂತೆ ಹಲವು ಸಲಹೆಗಳು ಈ ಆ್ಯಪ್​​​ನಲ್ಲಿ ಲಭ್ಯವಿವೆ.

ಆ್ಯಪ್​ ಸಮರ್ಪಕಾಗಿ ಕಾರ್ಯ ನಿರ್ವಹಿಸಬೇಕಾದರೆ ಮೊಬೈಲ್​​ನ ಬ್ಲೂಟೂತ್​​​ ಮತ್ತು ಜಿಪಿಎಸ್​​​ ಚಾಲನೆಯಲ್ಲಿ ಇರಬೇಕು. ಸೋಂಕಿತರು ಪತ್ತೆಯಾದ ಜಾಗ, ಅವರ ಸಂಪರ್ಕ ಹೊಂದಿರುವರ, ಸೋಂಕಿನ ಅಪಾಯವನ್ನೂ ಸೂಚಿಸುತ್ತದೆ.

ಆರೋಗ್ಯ ಸೇತು ಆ್ಯಪ್​​​ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ಕೇಳಿ ಬಂದಿತ್ತು. ಹೀಗಾಗಿ ಪ್ರಮುಖ ಶೈಕ್ಷಣಿಕ ಮತ್ತು ಉದ್ಯಮ ತಜ್ಞರು ಸುರಕ್ಷತಾ ದೋಷಗಳನ್ನು ಕಟ್ಟುನಿಟ್ಟಾಗಿ ಪರೀಶೀಲಿಸಿದ್ದಾರೆ. ಅವರು ಆ್ಯಪ್​​ ಸಂಗ್ರಹಿಸಿದ ವೈಯಕ್ತಿಕ ಡೇಟಾವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಎನ್‌ಕ್ರಿಫ್ಟ್​​ ಮಾಡಲಾಗಿದೆ ಮತ್ತು ಸುರಕ್ಷಿತವಾಗಿ ಇರಿಸಿದ್ದಾರೆ.

ABOUT THE AUTHOR

...view details