ಚಂಡೀಗಡ್ : ತಾಂಡಾದಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದುನ್ನು ಆಮ್ ಆದ್ಮಿ ಪಕ್ಷದ ಮಹಿಳಾ ಶಾಸಕರು ಖಂಡಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಆಮ್ ಆದ್ಮಿ ಪಕ್ಷ ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ಕಟ್ಟುನಿಟ್ಟಿನ ಕಾನೂನು ವ್ಯವಸ್ಥೆ ತರುವಲ್ಲಿ ಸಂಪೂರ್ಣ ವಿಫಲರಾಗಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಅಪರಾಧದ ಹೊಣೆಗಾರರಾಗಿದ್ದಾರೆ. ಈ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದರ ಜೊತೆಗೆ ರಾಜ್ಯ ಗೃಹ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಪ್ರತಿಪಕ್ಷದ ಉಪನಾಯಕರಾದ ಸರ್ವ್‌ಜೀತ್ ಕೌರ್ ಮನುಕೆ, ಬಲ್ಜಿಂದರ್ ಕೌರ್, ಮತ್ತು ರೂಪಿಂದರ್ ಕೌರ್ ರೂಬಿ ಅವರಂತಹ ದೊಡ್ಡ ನಾಯಕರು ಭ್ರಷ್ಟಾಚಾರ ಮತ್ತು ಪೊಲೀಸ್ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡುದ್ದು, ಪೊಲೀಸ್ ವ್ಯವಸ್ಥೆಯೇ ನಾಶವಾಗಿದೆ ಎಂದು ಆರೋಪಿಸಿದರು.