ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನಗಳು ಬಾಕಿ ಇವೆ. ಈ ಹಿನ್ನೆಲೆ ಆಡಳಿತರೂಢ ಆಮ್ ಆದ್ಮಿ ಪಕ್ಷ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಲಿದೆ.
ನಾಲ್ಕೇ ದಿನಗಳಲ್ಲಿ ದೆಹಲಿ ಚುನಾವಣೆ: ಇಂದು ಎಎಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ - Arvind Kejriwal
ಕಾಂಗ್ರೆಸ್ ಮತ್ತು ಬಿಜೆಪಿ ಈ ಮೊದಲೇ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಆದರೆ ಎಎಪಿ ಇದುವರೆಗೂ ಪ್ರಣಾಳಿಕೆ ಬಿಡುಗಡೆ ಮಾಡಿರಲಿಲ್ಲ. ಆದ್ರೆ ಈ ಬಾರಿಯ ಪ್ರಣಾಳಿಕೆಯಲ್ಲೂ ಈ ಹಿಂದೆ ನೀಡಿದ್ದ ಭರವಸೆಗಳೇ ಮುಂದುವರೆಯಲಿವೆ ಎಂದು ಹೇಳಲಾಗ್ತಿದೆ.
ಎಎಪಿ ಪ್ರಣಾಳಿಕೆ
ಕಾಂಗ್ರೆಸ್ ಮತ್ತು ಬಿಜೆಪಿ ಈ ಮೊದಲೇ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಜನವರಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು 'ಕೇಜ್ರಿವಾಲ್ ಕಾ ಗ್ಯಾರಂಟಿ ಕಾರ್ಡ್' ನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ 200 ಯುನಿಟ್ ಉಚಿತ ವಿದ್ಯುತ್ ಹಾಗೂ 24x7 ಶುದ್ಧ ಕುಡಿಯುವ ನೀರನ್ನು ಪ್ರತಿ ಮನೆಗೂ ನೀಡುವ ಭರವಸೆಯನ್ನು ನೀಡಲಾಗಿತ್ತು. ಇದೇ ಭರವಸೆ ಈ ಪ್ರಣಾಳಿಕೆಯಲ್ಲೂ ಇರಲಿದೆ ಎಂದು ಹೇಳಲಾಗ್ತಿದೆ.
ದೆಹಲಿಯ 70 ವಿಧಾನಸಭಾ ಸ್ಥಾನಗಳ ಮತದಾನ ಇದೇ ತಿಂಗಳ 8 ರಂದು ನಡೆಯಲಿದ್ದು, ಫೆಬ್ರುವರಿ 11 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.