ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಮಾತುಗಳನ್ನ ಆಡಿದ್ದರಿಂದ ಆಮ್ ಆದ್ಮಿ ಪಕ್ಷ ಕಠಿಣ ಕ್ರಮ ತೆಗೆದುಕೊಂಡಿದೆ. ಮಾಜಿ ಶಾಸಕ ಮತ್ತು ಸಿಖ್ ಮುಖಂಡ ಜರ್ನೈಲ್ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.
ಧರ್ಮ ನಿಂದನೆ ಆರೋಪ : ಎಎಪಿ ಪ್ರಾಥಮಿಕ ಸದಸ್ಯತ್ವದಿಂದ ಮಾಜಿ ಶಾಸಕ ಅಮಾನತು - ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಪೋಸ್ಟ್
ಧರ್ಮ ನಿಂದನೆ ಆರೋಪದಡಿ ಮಾಜಿ ಶಾಸಕ ಮತ್ತು ಸಿಖ್ ಮುಖಂಡ ಜರ್ನೈಲ್ ಸಿಂಗ್ ಅವರನ್ನು ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.
ಪಿಎಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಂಜಾಬ್‌ಗೆ ಆಮ್ ಆದ್ಮಿ ಪಕ್ಷದ ಉಸ್ತುವಾರಿ ಮತ್ತು ತಿಲಕ್ ನಗರ ಶಾಸಕ, ಜರ್ನೈಲ್ ಸಿಂಗ್ ಅಮಾನತು ಮಾಡಿ ಪಕ್ಷ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರಾಜೌರಿ ಗಾರ್ಡನ್‌ನ ಮಾಜಿ ಶಾಸಕರಾಗಿರುವ ಜರ್ನೈಲ್ ಸಿಂಗ್ ಅವರು ಧರ್ಮನಿಂದನೆಯ ಮಾತುಗಳನ್ನು ಬಳಸಿದ್ದಾರೆ. ಹೀಗಾಗಿ ಪಕ್ಷವು ಅವರಿಗೆ ನೋಟಿಸ್ ಕಳುಹಿಸಿದೆ ಎಂದಿದ್ದಾರೆ.
ಈ ಮಧ್ಯೆ ಜರ್ನೈಲ್ ಸಿಂಗ್ ತಾವು ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ್ದು, ಕ್ಷಮೆ ಯಾಚಿಸಿದ್ದಾರೆ. ಜರ್ನೈಲ್ ಸಿಂಗ್ ಅವರು 2017 ರಲ್ಲಿ ಲಂಬಿಯಿಂದ ಮಾಜಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 1984 ರ ಸಿಖ್ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಶೂ ಎಸೆದು ಗಮನ ಸೆಳೆದಿದ್ದರು. ಈ ಪ್ರಕರಣದ ನಂತರ ಇವರು ಮುನ್ನಲೆಗೆ ಬಂದಿದ್ದರು.