ನವದೆಹಲಿ:ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಆಮ್ ಆದ್ಮಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಮತದಾರ ಪ್ರಭುಗಳನ್ನ ಸೆಳೆಯುವ ದೃಷ್ಟಿಯಿಂದ ಹೊಸ ಹೊಸ ಭರವಸೆ ನೀಡುತ್ತಿವೆ.
ಮನೆ ಮನೆಗೆ ಪಡಿತರ, ಹಿರಿಯರಿಗೆ ಉಚಿತ ತೀರ್ಥಯಾತ್ರೆ: ಎಎಪಿ ಪ್ರಣಾಳಿಕೆಯಲ್ಲಿ ಏನೆಲ್ಲ! - ದೆಹಲಿ ವಿಧಾನಸಭೆ ಫೈಟ್
ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯೋಜನೆ ರೂಪಿಸಿಕೊಂಡಿರುವ ಆಮ್ ಆದ್ಮಿ ಪಕ್ಷ ಇದೀಗ ಪ್ರಣಾಳಿಕೆಯಲ್ಲಿ ಭರಪೂರ ಕೂಡುಗೆ ಘೋಷಣೆ ಮಾಡಿದೆ.
![ಮನೆ ಮನೆಗೆ ಪಡಿತರ, ಹಿರಿಯರಿಗೆ ಉಚಿತ ತೀರ್ಥಯಾತ್ರೆ: ಎಎಪಿ ಪ್ರಣಾಳಿಕೆಯಲ್ಲಿ ಏನೆಲ್ಲ! AAP releases manifesto](https://etvbharatimages.akamaized.net/etvbharat/prod-images/768-512-5952402-thumbnail-3x2-wdfdfdf.jpg)
ಚುನಾವಣೆಗಾಗಿ ಈಗಾಗಲೇ ಬಿಜೆಪಿ ಪ್ರಣಾಳಿಕೆ ರಿಲೀಸ್ ಮಾಡಿದ್ದು, ಇದೀಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿ, ಭರವಸೆಗಳ ಮಾಹಪೂರವನ್ನೇ ಹರಿಸಿದೆ. 10 ಅಂಶಗಳನ್ನೊಳಗೊಂಡಿರುವ ಪ್ರಣಾಳಿಕೆಯಲ್ಲಿ ವಿದ್ಯುತ್ ಹಾಗೂ ಕುಡಿವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಳಿದಂತೆ ಶಿಕ್ಷಣ, ಆರೋಗ್ಯಕ್ಕೂ ಗಮನ ನೀಡಲಾಗಿದ್ದು, 24 ಗಂಟೆ ವಿದ್ಯುತ್ ನೀಡುವ ಭರವಸೆ ನೀಡಿದೆ.
ಪ್ರಮುಖವಾಗಿ ಮನೆ ಮನೆಗೆ ಪಡಿತರ ವಿತರಣೆ ಮಾಡುವ ಯೋಜನೆ ಘೋಷಣೆ ಮಾಡಿರುವ ಆಪ್, ಪ್ರತಿ ವರ್ಷ 10 ಲಕ್ಷ ಹಿರಿಯ ನಾಗರಿಕರಿಗೆ ಉಚಿತವಾಗಿ ತೀರ್ಥಯಾತ್ರೆ ಮಾಡಿಸುವ ಯೋಜನೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.