ಕರ್ನಾಟಕ

karnataka

ETV Bharat / bharat

ಕೋವಿಡ್​ ಪ್ರೋಟೋಕಾಲ್​ ಬ್ರೇಕ್: ಹಥ್ರಾಸ್​ಗೆ ತೆರಳಿದ್ದ ಎಎಪಿ ಶಾಸಕನ ವಿರುದ್ಧ ದೂರು! - ಆಮ್​ ಆದ್ಮಿ ಪಕ್ಷದ ಶಾಸಕ ಕುಲ್ದೀಪ್​ ಕುಮಾರ್​ ವಿರುದ್ಧ ದೂರು

ಮಹಾಮಾರಿ ಕೊರೊನಾ ವೈರಸ್​ ಸೋಂಕು ತಗುಲಿದ್ದು ಗೊತ್ತಿದ್ದೂ ಕೂಡಾ ಹಥ್ರಾಸ್​ಗೆ ತೆರಳಿ ಕೋವಿಡ್​ ಪ್ರೋಟೋಕಾಲ್​ ಬ್ರೇಕ್​ ಮಾಡಿರುವ ಎಎಪಿ ಶಾಸಕನ ವಿರುದ್ಧ ದೂರು ದಾಖಲಾಗಿದೆ.

AAP MLA
AAP MLA

By

Published : Oct 7, 2020, 5:24 PM IST

ಹಥ್ರಾಸ್​​(ಯುಪಿ): ಉತ್ತರ ಪ್ರದೇಶದ ಹಥ್ರಾಸ್​ನಲ್ಲಿ ನಡೆದ ದಲಿತ ಬಾಲಕಿ ಅತ್ಯಾಚಾರ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ನಡೆದ ಬಳಿಕ ವಿವಿಧ ಪಕ್ಷದ ಮುಖಂಡರು ಸಂತ್ರಸ್ತೆ ಮನೆಗೆ ತೆರಳಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.

ಇದೇ ವಿಚಾರವಾಗಿ ಆಮ್​ ಆದ್ಮಿ ಪಕ್ಷದ ಶಾಸಕ ಕುಲ್ದೀಪ್​ ಕುಮಾರ್​ ಕೂಡ ಹಥ್ರಾಸ್​ಗೆ ತೆರಳಿ ಸಂತ್ರಸ್ತೆ ಕುಟುಂಬದವರನ್ನ ಭೇಟಿ ಮಾಡಿದ್ದರು. ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದರೂ, ಕೋವಿಡ್​ ಪ್ರೋಟೋಕಾಲ್​ ಬ್ರೇಕ್​ ಮಾಡಿ ಅಲ್ಲಿಗೆ ತೆರಳಿದ್ದರು ಎಂಬುದು ಇದೀಗ ಬಹಿರಂಗಗೊಂಡಿದೆ.

ಅಕ್ಟೋಬರ್​ 4ರಂದು ಅವರು ಸಂತ್ರಸ್ತೆ ಕುಟುಂಬದ ಭೇಟಿ ಮಾಡಿದ್ದರು. ಆದರೆ, ಸೆಪ್ಟೆಂಬರ್​​ 29ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಅವರ ವಿರುದ್ಧ ಚಂದಪಾ ಪೊಲೀಸ್ ಠಾಣೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಎಫ್​ಐಆರ್​ ದಾಖಲು ಮಾಡಲಾಗಿದೆ.

ಇದೀಗ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್​​ಗೆ ಒಳಗಾಗಬೇಕು ಎಂದು ತಿಳಿಸಿರುವ ಪೊಲೀಸರು, ನೋಟಿಸ್ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ಸೆಪ್ಟೆಂಬರ್​ 14ರಂದು ಹಥ್ರಾಸ್​ನಲ್ಲಿ ದಲಿತ ಯುವತಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿದ್ದರು. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನ ದೆಹಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್​​ 30ರಂದು ಸಾವನ್ನಪ್ಪಿದ್ದಳು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಂತ್ರಸ್ತೆ ಕುಟುಂಬಕ್ಕೆ ಕಾಂಗ್ರೆಸ್​ನ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದ್ದರು.

ABOUT THE AUTHOR

...view details