ಕರ್ನಾಟಕ

karnataka

ETV Bharat / bharat

ಎಎಪಿ ಶಾಸಕರಿಂದ ಲಾಕ್​ಡೌನ್​ ಉಲ್ಲಂಘನೆ: ಗರಂ ಆದ ಪೊಲೀಸರಿಂದ ರಸ್ತೆಯಲ್ಲೇ ಕ್ಲಾಸ್​ ​

ಕೊರೊನಾ ವೈರಸ್​​ ತಡೆಗಟ್ಟುವ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ ದೆಹಲಿಯ ಎಎಪಿ ಶಾಸಕರೊಬ್ಬರು ಈ ಲಾಕ್​ಡೌನ್​ ಉಲ್ಲಂಘನೆ ಮಾಡಿದ್ದು, ಸ್ಥಳದಲ್ಲಿದ್ದ ಪೊಲೀಸರು ಅವರಿಗಗೆ ರಸ್ತೆಯಲ್ಲೇ ಕ್ಲಾಸ್​ ತೆಗೆದುಕೊಂಡಿದ್ದಾರೆ.

AAP Minister accused of violating lockdown
ಎಎಪಿ ಶಾಸಕರಿಂದ ಲಾಕ್​ಡೌನ್​ ಉಲ್ಲಂಘನೆ

By

Published : Apr 28, 2020, 3:05 PM IST

ನವದೆಹಲಿ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಎಎಪಿ ಶಾಸಕ ಇಮ್ರಾನ್ ಹುಸೇನ್ ಅವರು ಕೊರೊನಾ ವೈರಸ್​​ನಿಂದಾಗಿ ಲಾಕ್​ಡೌನ್​ ಘೋಷಣೆಯಾಗಿದ್ದರೂ ಸಹ ಇದನ್ನು ಲೆಕ್ಕಿಸದೆ ಲಾಕ್‌ಡೌನ್ ಉಲ್ಲಂಘಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಎಪಿ ಶಾಸಕ ಸೋಮವಾರ ಸಂಜೆ ದೆಹಲಿಯ ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾದ ಸದರ್ ಬಜಾರ್ ಪ್ರದೇಶದಲ್ಲಿ ಲಾಕ್​ಡೌನ್​ನ ನಿಯಮ ಮೀರಿ ಸುಮಾರು 25 ಜನರ ಗುಂಪಿನೊಂದಿಗೆ ಮತ್ತು ಹಲವು ಕಾರುಗಳೊಂದಿಗೆ ತೆರಳುತ್ತಿದ್ದುದು ಕಂಡುಬಂದಿದೆ. ಆಗ ಪೊಲೀಸ್​​ ಅಧಿಕಾರಿ ಅಶೋಕ್ ಕುಮಾರ್ ಅವರು, ಶಾಸಕ ಹುಸೇನ್ ನೇತೃತ್ವದ ಸಭೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಎಎಪಿ ಶಾಸಕರಿಂದ ಲಾಕ್​ಡೌನ್​ ಉಲ್ಲಂಘನೆ

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ ಶಾಸಕರಿಗೆ ಪೊಲೀಸ್​ ಅಧಿಕಾರಿಗಳು ಸ್ಥಳದಲ್ಲಿಯೇ ಕ್ಲಾಸ್​ ತೆಗೆದುಕೊಂಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿವೆ.

ಈ ಬಗ್ಗೆ ದೆಹಲಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಕಾನೂನು ಎಲ್ಲರಿಗೂ ಒಂದೇ. ಲಾಕ್​​ಡೌನ್​ ಉಲ್ಲಂಘಿಸಿದವರು ಯಾರಾದರೂ ಸರಿಯೇ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ

ದೆಹಲಿಯಲ್ಲಿ ಸೋಮವಾರ 190 ಹೊಸ ಕೊರೊನಾ ವೈರಸ್ ಪ್ರಕರಣಗಳು ಸೇರಿದಂತೆ ಒಟ್ಟು 3,108 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಈವರೆಗೆ 54 ಜನರು ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details