ನವದೆಹಲಿ : ಬಾಲಿವುಡ್ ನಟ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ಹಾಲಿವುಡ್ನ ಟಾಮ್ ಹ್ಯಾಂಕ್ಸ್ ನಟಿಸಿರುವ 'ಫಾರೆಸ್ಟ್ ಗಂಪ್'ನ ಹಿಂದಿ ರಿಮೇಕ್ ಆಗುತ್ತಿದ್ದು, ಇದರ ಚಿತ್ರೀಕರಣ ಈಗ ದೆಹಲಿಯಲ್ಲಿ ನಡೆಯುತ್ತಿದೆ.
ದೆಹಲಿಯಲ್ಲಿ ಬೀಡುಬಿಟ್ಟ ಲಾಲ್ ಸಿಂಗ್ ಚಡ್ಡಾ ಚಿತ್ರ ತಂಡ; ಅಮೀರ್ ಹೊಸ ಕಸರತ್ತು - ಫಾರೆಸ್ಟ್ ಗಂಪ್ ರಿಮೇಕ್
ನಟ ಅಮೀರ್ ಖಾನ್ ಅವರ ಮುಂಬರುವ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಚಿತ್ರೀಕರಣ ಬರದಿಂದ ಸಾಗಿದೆ. ದೆಹಲಿಯಲ್ಲಿ ಅದ್ಧೂರಿ ಸೆಟ್ ನಿರ್ಮಾಣ ಮಾಡಿರುವ ಅಮೀರ್ ಖಾನ್, ಕೆಲವು ಸೀನ್ಗಳನ್ನು ಸೆರೆಹಿಡಿಯಲು ಕಸರತ್ತು ನಡೆಸಿದ್ದಾರೆ.
ಬಾಲಿವುಡ್ ನಟ ಅಮೀರ್ ಖಾನ್
ಲಾಲ್ ಸಿಂಗ್ ಚಡ್ಡಾ ಚಿತ್ರದ ಕೆಲವು ಸನ್ನಿವೇಶಗಳಿಗಾಗಿ ಅಮೀರ್ ಖಾನ್ ಹಲವು ವಿದೇಶ ಸೇರಿದಂತೆ ದೇಶೀಯ ಪ್ರದೇಶಗಳನ್ನು ಗುರುತಿಸಿಕೊಂಡಿದ್ದರು. ಇವುಗಳಲ್ಲಿ ರಾಷ್ಟ್ರರಾಜಧಾನಿ ನವದೆಹಲಿ ಕೂಡ ಇತ್ತು. ಅದರಂತೆ ಈಗ ದೆಹಲಿಯ ಕೆಲವು ಆಯ್ದ ಸ್ಥಳದಲ್ಲಿ ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ.
ಚಿತ್ರೀಕರಣಕ್ಕಾಗಿ ಸೆಟ್ ಹಾಕಲಾಗಿದ್ದು, ಹಲವು ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ. ಚಿತ್ರೀಕರಣದ ಸ್ಥಳದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಅಮೀರ್ ಖಾನ್ ಮಾತನಾಡುತ್ತಿರುವುದು ಕಂಡುಬಂದಿದೆ. ಕರೀನಾ ಕಪೂರ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ.