ಕರ್ನಾಟಕ

karnataka

ETV Bharat / bharat

ಗಮನಿಸಿ: ಪಾನ್​​​ ಜತೆ ಆಧಾರ್​​ ಜೋಡಣೆಗೆ ಮತ್ತೆ ಅವಧಿ ವಿಸ್ತರಣೆ! - ಪಾನ್​ ಜತೆ ಆಧಾರ್​​ ಜೋಡಣೆಗೆ ಡಿ.31

ಆಧಾರ್​-ಪಾನ್​ ಲಿಂಕ್ ಮಾಡಲು ನೀಡಲಾಗಿದ್ದ ಕೊನೇ ದಿನಾಂಕದಲ್ಲಿ ಹೆಚ್ಚುವರಿ ಮಾಡಿ ಇದೀಗ ಆದೇಶ ಹೊರಡಿಸಲಾಗಿದ್ದು, ಇದರಿಂದ ಗ್ರಾಹಕರು ಮತ್ತಷ್ಟು ನಿರಾಳಗೊಂಡಿದ್ದಾರೆ.

Aadhaar-PAN linking deadline
ಪಾನ್​-ಆಧಾರ್​ ಜೋಡಣೆ ದಿನಾಂಕ

By

Published : Dec 30, 2019, 9:29 PM IST

ನವದೆಹಲಿ:ಪಾನ್ ಮತ್ತು ಆಧಾರ್ ಜೋಡಣೆ ಮಾಡಲು ನೀಡಲಾಗಿದ್ದ ಸಮಯಾವಕಾಶ ವಿಸ್ತರಣೆ ಮಾಡಿ ಕೇಂದ್ರ ನೇರ ತೆರಿಗೆಗಳ ಮಂಡಳಿ ಆದೇಶ ಹೊರಡಿಸಿದೆ. ಇದರಿಂದ ಗ್ರಾಕರಿಗೆ ಮತ್ತಷ್ಟು ನಿರಾಳವಾಗಿದೆ.

ಈಗಾಗಲೇ ನೀಡಲಾಗಿದ್ದ ಸಮಯದ ಪ್ರಕಾರ ಡಿಸೆಂಬರ್​ 31(ನಾಳೆ)ರೊಳಗೆ ಪಾನ್​ ಕಾರ್ಡ್​ ಸಂಖ್ಯೆಗೆ ಆಧಾರ್ ಕಾರ್ಡ್​ ಜೋಡನೆ ಮಾಡುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಅವಧಿ ವಿಸ್ತರಿಸಲಾಗಿದ್ದು, ಮುಂದಿನ ವರ್ಷ ಮಾರ್ಚ್​ 31ರವರೆಗೆ ಜೋಡಣೆ ಮಾಡಬಹುದಾಗಿದೆ.

ಈ ಹಿಂದೆ ಸಹ ಹಲವು ಸಲ ಪಾನ್ ಕಾರ್ಡ್​ಗೆ ಆಧಾರ್​ ಕಾರ್ಡ್​ ಜೋಡನೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆ ಅವಕಾಶವನ್ನ 2019ರ ಡಿಸೆಂಬರ್​ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಇದೀಗ ಆ ಅವಧಿಯಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.

ಈ ಹಿಂದೆ ಬರೊಬ್ಬರಿ 7 ಬಾರಿ ಪಾನ್ ಜತೆ ಆಧಾರ್​ ಲಿಂಕ್ ಮಾಡಲು ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೂ ನಿರೀಕ್ಷಿತ ಮಟ್ಟದಲ್ಲಿ ಪಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಆಗದ ಕಾರಣ ಮತ್ತೆ ಅವಧಿ ವಿಸ್ತರಿಸಲಾಗಿದೆ.

ABOUT THE AUTHOR

...view details