ಕರ್ನಾಟಕ

karnataka

ETV Bharat / bharat

ಆಧಾರ್​ ಕಾರ್ಡ್​ ಕಳೆದಿದೆಯಾ..? ಹೊಸ ಕಾರ್ಡ್​ ಪಡೆಯಲು ಹೀಗೆ ಮಾಡಿ - ಯುಐಡಿಎಐ

ಆಧಾರ್ ಕಾರ್ಡ್​ ಕಳೆದರೆ ಅದನ್ನು ಮತ್ತೆ ಪಡೆಯುವ ಅವಕಾಶವನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಒದಗಿಸಿದೆ. ಆಧಾರ್ ಕಾರ್ಡ್‌ ನೋಂದಾಯಿಸುವ ಸಮಯದಲ್ಲಿ ಒದಗಿಸಲಾದ ಸ್ವೀಕೃತಿ ಸ್ಲಿಪ್‌ನಲ್ಲಿನ ದಾಖಲಾತಿ ಸಂಖ್ಯೆಯನ್ನು ಒದಗಿಸುವ ಮೂಲಕ ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ಆಧಾರ್ ಕಾರ್ಡ್‌ನ ಮತ್ತೊಂದು ಪ್ರತಿ ಪಡೆಯಬಹುದಾಗಿದೆ.

ಸಾಂದರ್ಭಿಕ ಚಿತ್ರ

By

Published : Oct 1, 2019, 12:28 PM IST

ನವದೆಹಲಿ: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) 12 ಸಂಖ್ಯೆಯ ಆಧಾರ್ ಕಾರ್ಡ್ ಅನ್ನು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆ, ಪ್ಯಾನ್ ಕಾರ್ಡ್ ಪಡೆಯುವುದು ಸೇರಿದಂತೆ ಇತರೆ ಯಾವುದೇ ಸರ್ಕಾರಿ ಯೋಜನೆಯ ಲಾಭ ಪಡೆಯಲು ಅಧಿಕೃತ ದಾಖಲಾತಿಯನ್ನಾಗಿ ಮಾಡಿಕೊಂಡಿದೆ.

ಒಂದು ವೇಳೆ ಆಧಾರ್ ಕಾರ್ಡ್​ ಕಳೆದರೇ ಅದನ್ನು ಮತ್ತೆ ಪಡೆಯುವ ಅವಕಾಶವನ್ನು ಯುಐಡಿಎಐ ಒದಗಿಸಿದೆ. ನೀವು ಆಧಾರ್ ಕಾರ್ಡ್‌ಗೆ ನೋಂದಾಯಿಸುವ ಸಮಯದಲ್ಲಿ ಒದಗಿಸಲಾದ ಸ್ವೀಕೃತಿ ಸ್ಲಿಪ್‌ನಲ್ಲಿನ ದಾಖಲಾತಿ ಸಂಖ್ಯೆಯನ್ನು ಒದಗಿಸುವ ಮೂಲಕ ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಿಂದ ಆಧಾರ್ ಕಾರ್ಡ್‌ನ ಮತ್ತೊಂದು ಪ್ರತಿ ಪಡೆಯಬಹುದಾಗಿದೆ.

ಆಧಾರ್ ಕಾರ್ಡ್‌ನ ನಕಲು ಪ್ರತಿ ಪಡೆಯುವುದು ಹೇಗೆ?
1. ಯುಐಡಿಎಐನ ಅಧಿಕೃತ ವೆಬ್​ಸೈಟ್​ಗೆ ಲಾಗ್​ಇನ್ ಆಗಿ

2. ಆರ್ಡರ್​ ಆಧಾರ್ ರೀ ಪ್ರಿಂಟ್ (Order Aadhaar Reprint)​ ಆಯ್ಕೆ ಕ್ಲಿಕ್ ಮಾಡಿ

3. ನಿಮ್ಮ ಆಧಾರ್​ ನಂಬರ್​ (ಯುಐಡಿ) ಅಥವಾ ದಾಖಲಾತಿ ಐಡಿ (ಇಐಡಿ) ಸಂಖ್ಯೆಗಳನ್ನು ನಮೂದಿಸಿ

4. ಸ್ಕ್ರೀನ್ ಮೇಲೆ ಕಾಣಿಸುವ ಸೆಕ್ಯೂರಿಟ್​ ಸಂಖ್ಯೆಗಳನ್ನು ಭರ್ತಿ ಮಾಡಿ ಮತ್ತು ಗೆಟ್​ ಒಟಿಪಿ ಆಯ್ಕೆ ಕ್ಲಿಕ್​ ಮಾಡಿ

5. ಒಟಿಪಿ ಸಂಖ್ಯೆಯು ವ್ಯಕ್ತಿಯ ನೋಂದಾಯಿತ ಮೊಬೈಲ್​ ಸಂಖ್ಯೆ/ ಇ-ಮೇಲ್​ಗೆ ಬರುತ್ತದೆ

6. ಪಡೆದ ಒಟಿಪಿ ಸಂಖ್ಯೆಗಳನ್ನು ನಮೂದಿಸಿ ಮತ್ತು ಒಟಿಪಿ ಪರಿಶೀಲಿಸಿ ಬಟನ್​ ಕ್ಲಿಕ್ ಮಾಡಿ

7. ಪಾವತಿ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ₹ 50 ಪಾವತಿಸಬೇಕಾಗುತ್ತದೆ (ಜಿಎಸ್‌ಟಿ ಸೇರಿದಂತೆ ಅಂಚೆ ಶುಲ್ಕ ಒಳಗೊಂಡಿರುತ್ತದೆ)

8. ಯಶಸ್ವಿಯಾಗಿ ಪಾವತಿ ಮಾಡಿದ ಮೇಲೆ 15 ದಿನಗಳೊಳಗೆ ನಿಮ್ಮ ಆಧಾರ್ ಕಾಪಿ ನಿಮ್ಮ ವಿಳಾಸಕ್ಕೆ ಬರುತ್ತದೆ

ABOUT THE AUTHOR

...view details