ಕರ್ನಾಟಕ

karnataka

ETV Bharat / bharat

50 ಸಾವಿರಕ್ಕೂ ಹೆಚ್ಚಿನ ಠೇವಣಿ, ಹಣ ವಿತ್​ಡ್ರಾಗೆ ಪಾನ್​​​​ ಬೇಕಿಲ್ಲ, ಆಧಾರ್​​​ ಸಾಕು!

ಬ್ಯಾಂಕ್​ಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಹಣ ಡ್ರಾ ಮಾಡಿಕೊಳ್ಳಲು ಅಥವಾ ಠೇವಣಿ ಇಡಲು ಇನ್ಮುಂದೆ ಆಧಾರ್​ ಕಾರ್ಡ್​ ಇದ್ದರೆ ಸಾಕು.

ಆಧಾರ್​​ಕಾರ್ಡ್​​

By

Published : Jul 6, 2019, 11:44 PM IST

ನವದೆಹಲಿ:50 ಸಾವಿರಕ್ಕಿಂತಲೂ ಹೆಚ್ಚಿನ ನಗದು ವಹಿವಾಟಿಗೆ ಇನ್ಮುಂದೆ ಆಧಾರ್​ ಕಾರ್ಡ್​ ಬಳಕೆ ಮಾಡಬಹುದು ಎಂದು ಕೇಂದ್ರ ಸರ್ಕಾರಿ ಅಧಿಕಾರಿವೋರ್ವರು ಖಚಿತಪಡಿಸಿದ್ದಾರೆ.

ಬ್ಯಾಂಕ್​​ನಲ್ಲಿ 50 ಸಾವಿರಕ್ಕೂ ಅಧಿಕ ನಗದು ಹಣ ವರ್ಗಾವಣೆ ಮಾಡಲು ಅಥವಾ ವಿತ್​ಡ್ರಾ ಮಾಡಿಕೊಳ್ಳುವ ವೇಳೆ ಪಾನ್​ ಕಾರ್ಡ್​ ಉಲ್ಲೇಖ ಕಡ್ಡಾಯವಾಗಿದ್ದು, ಇದೀಗ ಆಧಾರ್​ ಕಾರ್ಡ್​ ಬಳಕೆ ಮಾಡಬಹುದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

ಈಗಾಗಲೇ ಬಜೆಟ್​​ನಲ್ಲಿ ತೆರಿಗೆ ಪಾವತಿ ಮಾಡಲು ಪಾನ್​ ಕಾರ್ಡ್​ ಬದಲಿಗೆ ಆಧಾರ್​ ಕಾರ್ಡ್ ಬಳಕೆ ಮಾಡಬಹುದು ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಈ ಮಾಹಿತಿ ಸಹ ಹೊರಬಿದ್ದಿದೆ. ದೇಶದಲ್ಲಿ ಇದೀಗ 22 ಕೋಟಿ ಪಾನ್​​ ಕಾರ್ಡ್​ಗಳಿದ್ದು, 110 ಕೋಟಿಗೂ ಅಧಿಕ ಜನರು ಆಧಾರ್​ ಕಾರ್ಡ್​ ಹೊಂದಿದ್ದಾರೆ. ಹಣ ವರ್ಗಾವಣೆ ಮಾಡಲು ಮೊದಲು ಅವರು ಆಧಾರ್ ಕಾರ್ಡ್​ ಬಳಸಬೇಕು. ತದನಂತರ ತಮ್ಮ ಪಾನ್​ ಕಾರ್ಡ್​ ಜನರೇಟ್​ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್​ಗಳಿದ 50 ಸಾವಿರಕ್ಕಿಂತಲೂ ಅಧಿಕ ಮೌಲ್ಯದ ಹಣ ಠೇವಣಿ ಇಡಲು ಅಥವಾ ಹಣ ಹಿಂಪಡೆದುಕೊಳ್ಳಲು ಇದರ ಬಳಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಆದರೆ ಹೋಟೆಲ್​,ವಿದೇಶಿ ಪ್ರಯಾಣ ಬಿಲ್​ಗಳಂತಹ ನಗದು ವಹಿವಾಟಿನ ವೇಳೆ ಪಾನ್​ ಕಾರ್ಡ್​ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಆಧಾರ್​ ಕಾರ್ಡ್​ ವ್ಯಕ್ತಿಯ ಬಯೋಮೆಟ್ರಿಕ್​ ಡೇಟಾದಿಂದ ಕಾರ್ಯನಿರ್ವಹಿಸುವುದರಿಂದ ಜನರು ಕೆಲವೊಮ್ಮೆ ಬೇರೆಯವರ ಪಾನ್ ಸಂಖ್ಯೆ ಬಳಕೆ ಮಾಡಿ ಮೋಸ ಮಾಡುತ್ತಿದ್ದು, ಇದೀಗ ಇದು ತಪ್ಪುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details