ಚೆನ್ನೈ: ಯುವಕನೋರ್ವ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಚಲಿಸುತ್ತಿದ್ದ ಬಸ್ನಲ್ಲೇ ತಾಳಿ ಕಟ್ಟಲು ಯತ್ನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಚಲಿಸುತ್ತಿದ್ದ ಬಸ್ನಲ್ಲೇ ಯುವತಿಗೆ ತಾಳಿ ಕಟ್ಟಲು ಮುಂದಾದ ಯುವಕ! - Sandr Kuppam near Ambur
ವೆಲ್ಲೂರಿನ ಅಂಬೂರ್ ಬಳಿಯ ಸ್ಯಾಂಡ್ರರ್ ಕುಪ್ಪಂನ ಜಗನ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಆಕೆ ಈತನನ್ನು ಪ್ರೀತಿ ಮಾಡುತ್ತಿರಲಿಲ್ಲ.

ತಾಳಿ ಕಟ್ಟಲು ಮುಂದಾದ ಯುವಕ
ವೆಲ್ಲೂರಿನ ಅಂಬೂರ್ ಬಳಿಯ ಸ್ಯಾಂಡ್ರರ್ ಕುಪ್ಪಂನ ಜಗನ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದರೆ, ಆಕೆ ಈತನನ್ನು ಪ್ರೀತಿ ಮಾಡುತ್ತಿರಲಿಲ್ಲ. ಇತ್ತೀಚೆಗಷ್ಟೇ ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೂ ಈ ಯುವಕ ಯುವತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ.
ತಾಳಿ ಕಟ್ಟಲು ಮುಂದಾದ ಯುವಕ
ನಿನ್ನೆ ಬೆಳಗ್ಗೆ ಆ ಯುವತಿ ಬಸ್ನಲ್ಲಿ ಸಂಚಾರ ಮಾಡುವಾಗ ಅದೇ ಬಸ್ ಹತ್ತಿದ್ದ ಆತ, ಮಾಂಗಲ್ಯ ಕಟ್ಟಲು ಮುಂದಾಗಿದ್ದಾನೆ. ಆ ವೇಳೆ ಯುವತಿ ಜೋರಾಗಿ ಕೂಗಿಕೊಂಡಿದ್ದರಿಂದ ಸನಿಹದಲ್ಲಿದ್ದ ಸಹ ಪ್ರಯಾಣಿಕರು ಆ ಯುವಕನ್ನು ಹಿಡಿದು ವನಿಯಂಬಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated : Dec 11, 2019, 7:04 AM IST