ಹೈದರಾಬಾದ್:ಪಾಕಿಸ್ತಾನದಲ್ಲಿರುವ ತನ್ನ ತಂದೆಯನ್ನ ನೋಡಲು ತೆರಳಿದ್ದ ಮಹಿಳೆ ಭಾರತಕ್ಕೆ ವಾಪಸ್ ಬರಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ತಂದೆ ನೋಡಲು ಪಾಕ್‌ಗೆ ಹೋದ ಮಹಿಳೆ, ಭಾರತಕ್ಕೆ ಬರಲಾಗದೆ ಸಂಕಷ್ಟ.. ಸುಷ್ಮಾ ನೆರವು ಕೋರಿದ ಕುಟುಂಬ ಸದಸ್ಯರು - undefined
ಭಾರತೀಯ ಮೂಲದ ವ್ಯಕ್ತಿಯನ್ನ ವಿವಾಹವಾಗಿದ್ದ ಪಾಕ್ ಮಹಿಳೆ ಪಾಕಿಸ್ತಾನಕ್ಕೆ ಹೋಗಿ ಹಿಂದಿರುಗಲಾಗದೆ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಭಾರತೀಯ ಮೂಲದ ವ್ಯಕ್ತಿಯನ್ನ ವಿವಾಹವಾಗಿದ್ದ ಪಾಕಿಸ್ತಾನದ ಮಹಿಳೆ, ತನ್ನ ಅನಾರೋಗ್ಯ ಪೀಡಿತ ತಂದೆಯನ್ನ ನೋಡಲು ತನ್ನಿಬ್ಬರು ಮಕ್ಕಳ ಜತೆಗೆ ಪಾಕಿಸ್ತಾನಕ್ಕೆ ತೆರಳಿದ್ರು. ಫೆಬ್ರವರಿ 27ಕ್ಕೆ ಭಾರತಕ್ಕೆ ಬರಬೇಕೆಂದು ದಿನಾಂಕ ನಿಗದಿಯಾಗಿತ್ತು. ಆದರೆ, ಪುಲ್ವಾಮಾ ದಾಳಿಯಿಂದ ಉಭಯ ರಾಷ್ಟ್ರಗಳ ನಡುವೆ ಉಂಟಾದ ಯುದ್ಧ ಭೀತಿಯಿಂದ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ.
ಆದರೆ, ಮಾರ್ಚ್ 3ರ ನಂತರ ಆಕೆಯ ವೀಸಾ ಅವಧಿ ಮುಗಿದಿದ್ದು ಭಾರತಕ್ಕೆ ಬರಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಭಾರತಕ್ಕ ವಾಪಸಾಗಲು ತನ್ನ ಸೊಸೆಗೆ ಸಹಾಯಮಾಡಿ ಎಂದು ಆಕೆಯ ಅತ್ತೆ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ಗೆ ಮನವಿ ಮಾಡಿದ್ದಾರೆ.