ಸೂರತ್:ದೇಶದಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ತ್ರಿವಳಿ ತಲಾಖ್ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ದೊರೆತ 24 ಗಂಟೆಯೊಳಗೆ ಸುರತ್ನಲ್ಲಿ ಓರ್ವ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.
ಸೂರತ್ನ 23 ವಯಸ್ಸಿನ ಮಹಿಳೆಯೊಬ್ಬಳು, 'ರಿಕ್ಷಾ ಖರೀದಿಗೆ ನನ್ನ ಪೋಷಕರು 40 ಸಾವಿರ ರೂ. ನೀಡಲಿಲ್ಲ ಎಂಬ ನೆಪವೊಡ್ಡಿ ನನ್ನ ಗಂಡ ತಲಾಖ್ ನೀಡಿದ್ದಾನೆ. ಅವನಿಗೆ ಶಿಕ್ಷೆ ಆಗಬೇಕು. ನನಗೆ ನ್ಯಾಯ ದೊರೆಯಬೇಕು' ಎಂದು ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.