ಕರ್ನಾಟಕ

karnataka

ETV Bharat / bharat

ನಾಲ್ಕು ಮಕ್ಕಳಿಗೆ ಜನ್ಮ ನೀಡಿದಳು ಮಹಾ ತಾಯಿ! - ಗುಜರಾತ್​ ಸುದ್ದಿ

ಗರ್ಭಿಣಿಯೋರ್ವಳು ನಾಲ್ವರು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಗುಜರಾತ್​ನ ದಾಹೋಡ್​​ದಲ್ಲಿ ನಡೆದಿದೆ.

woman gave birth to four children
woman gave birth to four children

By

Published : Sep 10, 2020, 4:29 PM IST

ದಾಹೋಡ್​​​(ಗುಜರಾತ್​):36 ವರ್ಷದ ಮಹಿಳೆಯೊಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಗುಜರಾತ್​ನ ದಾಹೋಡ್​​​ನಲ್ಲಿ ನಡೆದಿದೆ. ಬೋರ್ಖೇಡಾ ಗ್ರಾಮದ ನಿವಾಸಿಯಾಗಿರುವ ಹೆರಿಗೆಗೋಸ್ಕರ ಆಸ್ಪತ್ರೆಗೆ ದಾಖಲಾಗಿದ್ದರು.

ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಶಸ್ತ್ರಚಿಕಿತ್ಸೆ ಮೂಲಕ ನಾಲ್ವರು ಮಕ್ಕಳಿಗೆ ಹೆರಿಗೆ ಮಾಡಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಎರಡು ವರ್ಷಗಳ ಹಿಂದೆ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದಳು. ಇದೀಗ ಎರಡನೇ ಹೆರಿಗೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದು, ವೈದ್ಯರಿಗೂ ಆಶ್ಚರ್ಯವಾಗಿದೆ. ವಿಶೇಷವೆಂದರೆ ಮಹಿಳೆ 8 ತಿಂಗಳು ಪೂರ್ಣಗೊಳಿಸಲು ಒಂದು ವಾರ ಬಾಕಿ ಉಳಿದಿತ್ತು. ಇದರ ಬೆನ್ನಲ್ಲೇ ಆಕೆಗೆ ಹೆರಿಗೆ ಮಾಡಿಸಲಾಗಿದೆ.

ಏಕಕಾಲದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡುವುದು ಅಪರೂಪದ ಘಟನೆಗಳಲ್ಲಿ ಒಂದಾಗಿದ್ದು, ಮಕ್ಕಳನ್ನ ಸದ್ಯ ಐಸಿಯುನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details